ಡಿ.೬ ಕ್ಕೆ ಹುತಾತ್ಮರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ


ದಾವಣಗೆರೆ. ಡಿ.೪; ರಾಮಜನ್ಮಭೂಮಿಯ ಹೋರಾಟದಲ್ಲಿ ಹುತಾತ್ಮರಾದವರ  ಸ್ಮರಣಾರ್ಥ ನಗರದ ವೆಂಕಟೇಶ್ವರ ವೃತ್ತದಲ್ಲಿ ಸ್ಮಾರಕ ನಿರ್ಮಾಣಮಾಡಬೇಕೆಂದು ಹೊರಾಟಗಾರ ಹಾಗೂ ಮಾಜಿ ಪಾಲಿಕೆ ಸದಸ್ಯ ಎ.ಆರ್ ರೇವಣಸಿದ್ದಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರಾಮಜನ್ಮಭೂಮಿಯ ಹೋರಾಟದಲ್ಲಿ ದಾವಣಗೆರೆ ಎಂಟು ಜನರು  ಹುತಾತ್ಮರಾಗಿದ್ದರು.ಅವರ ಸ್ಮರಣಾರ್ಥವಾಗಿ ಸ್ಮಾರಕ ನಿರ್ಮಾಣ ಮಾಡಬೇಕಿದೆ.ಆದ್ದರಿಂದ ರಥಯಾತ್ರೆ ಪ್ರಾರಂಭಗೊಂಡ ಸ್ಥಳ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತ ಇಂದಿಗೂ ಚಿರಸ್ಮರಣೆಯಾಗಿದೆ.ಈ ಭಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.ಇಂದಿಗೂ ಕೂಡ ದಸರಾ ಹಾಗೂ ವಿಜಯದಶಮಿ ಹಬ್ಬದಲ್ಲಿ ಶೋಭಾಯಾತ್ರೆ ವೆಂಕಟೇಶ್ವರ ವೃತ್ತದಿಂದಲೇ ಪ್ರಾರಂಭಗೊಳ್ಳುತ್ತಿದೆ ಎಂದರು.ಡಿ.೬ ರಂದು ಬೆಳಗ್ಗೆ ೧೦ಕ್ಕೆ ವೆಂಕಟೇಶ್ವರ ವೃತ್ತದಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಕಳೆದ ೩೧ ವರ್ಷದ ಹಿಂದೆ ಶ್ರೀ ರಾಮಜನ್ಮ ಭೂಮಿ ಮಂದಿರ ರಥಯಾತ್ರೆಗೆ ಬಲಿದಾನವಾದ ಹುತಾತ್ಮರಿಗೆ ಶ್ರದ್ಧಾಂಜಲಿ ಹಮ್ಮಿಕೊಳ್ಳಲಾಗಿದೆ ನಂತರ ಮಹಾನಗರ ಪಾಲಿಕೆಗೆ, ಶಾಸಕರಿಗೆ,ಸಂಸದರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ನಾಯ್ಕ್,ಪ್ರಭುಕಲ್ಬುರ್ಗಿ,ಗೌಳಿ ಲಿಂಗರಾಜ್ ಮತ್ತಿತರರಿದ್ದರು.Attachments area