ಡಿ.೫ ಕ್ಕೆ ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣ


ದಾವಣಗೆರೆ. ಡಿ.೩; ಅಪ್ಪು ಅಭಿಮಾನಿ ಬಳಗದಿಂದ ಡಿ.೫ ರಂದು ನಗರದ ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆಯ ಸಿದ್ದರಾಮೇಶ್ವರ ವೃತ್ತದಲ್ಲಿ ಬೆಳಗ್ಗೆ ೧೦.೩೦ ಕ್ಕೆ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ಪ್ರತಿಷ್ಠಾಪನೆ, ನೇತ್ರದಾನ ಹಾಗೂ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿಮಾನಿ ಬಳಗದ ಹೆಚ್.ತಿಮ್ಮಣ್ಣ ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.ಕಾರ್ಯಕ್ರಮದ ನೇತೃತ್ವವನ್ನು: ಶ್ರೀ ಸಿದ್ದರಾಮೇಶ್ವರ ಯುವಕರ ಸಂಘ , ಶ್ರೀ ವರಸಿದ್ಧಿ ವಿನಾಯಕ ಸಂಘ , ಶ್ರೀ ಮಾರಿಕಾಂಬ ಯುವಕರ ಸಂಘದವರು ವಹಿಸಿಕೊಂಡಿದ್ದಾರೆ. ಪುತ್ಥಳಿಯನ್ನು  ಬಾಡಾ ಕ್ರಾಸ್ ನ ಡಾ.ಪಂಡಿತ್ ಪುಟ್ಟರಾಜ ಕವಿಗವಾಯಿಗಳವರ ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಂಧಮಕ್ಕಳು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ ೧೨ ಕ್ಕೆ ಸುಮಾರು ೪ ಸಾವಿರ ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ. ಎರಡೂವರೆ ಅಡಿ ಎತ್ತರದ ಪುತ್ಥಳಿಯನ್ನು ಬೆಂಗಳೂರಿನ ಪ್ರವೀಣ್ ಆಚಾರ್ ನಿರ್ಮಿಸಿದ್ದಾರೆ.ದಾನಿಗಳ ಸಹಯೋಗದಿಂದ ಸಾರು ೪೦ ಸಾವಿರ ರೂ ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಲಾಗಿದೆ. ಅಂದು ಸಂಜೆ ೬.೩೦ ಕ್ಕೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಎ.ರಾಜಪ್ಪ,ಲೋಕೆಶಪ್ಪ ಹೆಚ್.ಎನ್ ಹೆಚ್ ರಾಜಪ್ಪ,ಹನುಮಂತಪ್ಪ,ದಾಸಪ್ಪ ಇದ್ದರು.