ಡಿ. ೩ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗೆ ಗುರುವಂದನೆ

ಬೆಂಗಳೂರು,ಡಿ.೧:ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೯ ನೇ ಜಯಂತೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ ದಕ್ಷಿಣ ಅಯೋಧ್ಯೆ ಖ್ಯಾತಿಯ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಂ, ನಿತ್ಯಾನಂದ ನಗರ, ಕನ್ಯಾಡಿ ಧರ್ಮಸ್ಥಳ ಪೀಠಾಧಿಪತಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಮಾಜದ ಮುಖಂಡ ಎಚ್. ರಾಜುಪೂಜಾರಿರವರು ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. ೩ ರಂದು ಗೆಳೆಯರ ಬಳಗದ ಡಾ. ರಾಜ್‌ಕುಮಾರ್ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಚಿವ ಮಂಕಾಳವೈದ್ಯರವರು ಶಿಕ್ಷಣ ಸಚಿವ ಮಧುಬಂಗಾರಪ್ಪ, ಶಾಸಕರಾದ ವೇಳೂರು ಗೋಪಾಲಕೃಷ್ಣ, ಕೆ. ಗೋಪಾಲಯ್ಯ, ಹರೀಶ್ ಪೂಂಜ, ಸುನಿಲ್ ಕುಮಾರ್, ಭೀಮಣ್ಣ ನಾಯ್ಕ್, ಪ್ರದೇಶ ಆರ್ಯಈಡಿಗರ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪರಿಚಯ
ಆತ್ಮಾನಂದ ಸ್ವಾಮೀಜಿಯವರ ಸಮಾಧಿಯ ನಂತರ ಧರ್ಮಸ್ಥಳ, ಕನ್ಯಾಡಿಯ ರಾಮಕ್ಷೇತ್ರ ಮಹಾಸಂಸ್ಥಾನದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನಾರಾಯಣ ಗುರುಗಳ ಒಂದೇ ಧರ್ಮ, ಒಂದೇ ಜಾತಿ ಒಂದೇ ಮತ ಎಂಬ ಧ್ಯೇಯವಾಕ್ಯದಡಿ ಕಾರ್ಯನಿರ್ವಹಿಸುತ್ತಿದ್ದು ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದಾರೆ. ಸಂಘಟನೆಯಿಂದ ಒಂದಾಗಿ ಶಿಕ್ಷಣದಿಂದ ಸಭಲರಾಗಿ ಎಂಬ ತತ್ವಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಉಡುಪಿಯ ಬಾರ್ಕೂರಿನಲ್ಲಿ ೧೫ ಏಕರೆ ಪ್ರದೇಶದಲ್ಲಿ ಅತ್ಯಾಧುನಿಕ ಮಾದರಿಯ ಐಟಿಐ ನಿರ್ಮಿಸಿ ೧೦೦ ಮಕ್ಕಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುವ ಕಾರ್ಯ ನಡೆಯುತ್ತಿದೆ.
ಎಂ.ಎ, ಸ್ನಾತಕೋತ್ತರ ಪದವಿಯೊಂದಿಗೆ ಕಾನೂನು ಪದವಿ ಪಡೆದಿರುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆದ್ಯಾತ್ಮ ಸಾಧನೆಯೊಂದಿಗೆ ಸ್ವಯಂ ಶಿಕ್ಷಣ ತಜ್ಞರು ಅಗಿದ್ದಾರೆ ಇದಕ್ಕೆ ಪೂರಕ ವೆಂಬಂತೆ ರಾಮಕ್ಷೇತ್ರದ ಗುರುದೇವ ಮಠದಲ್ಲಿ ಎಲ್ ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ ತನಕ ಗುರುಕುಲ ಮಾಧರಿಯ ಶಿಕ್ಷಣದ ಜೊತೆಗೆ ಯೋಗ, ಧ್ಯಾನ,ಭಜನೆ, ಸತ್ಸಂಗ, ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿದ್ದರು ಇದಕ್ಕಾಗಿ ವಾರ್ಷಿಕ ೬೦ ರಿಂದ ೭೦ ಲಕ್ಷ ರೂಪಾಯಿ ವೆಚ್ಚ ಮಾಡುತ್ತಿದ್ದರು. ಕೊರೋನಾ ಸಂಕಷ್ಟ ಸಮಯದಲ್ಲಿ ಇದು ತಾತ್ಕಾಲಿ ಸ್ಥಗಿತವಾಗಿತು. ಈ ವ್ಯವಸ್ಥೆಯನ್ನು ಸರಿಪಡಿಸಲು ಗುರುಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.