ಡಿ.೩೧ ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ

ಹೊನ್ನಾಳಿ.ಡಿ.೨೮; ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ರಥೋತ್ಸವ ಮತ್ತು ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಕಾರ‍್ಯಕ್ರಮಗಳು ಡಿ.30 ಮತ್ತು 31ರಂದು ನಡೆಯಲಿವೆ. ಪ್ರತಿ ವರ್ಷ ಸಾಮೂಹಿಕ ವಿವಾಹ ಸಮಾರಂಭ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್-19ರ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹ ಸಮಾರಂಭ ರದ್ದುಪಡಿಸಲಾಗಿದೆ ಎಂದು ಶ್ರೀ ಗದ್ದಿಗೇಶ್ವರ, ಬಸವಣ್ಣ, ರಾಮೇಶ್ವರ ಕಮಿಟಿ ಅಧ್ಯಕ್ಷ ಟಿ.ಎಸ್. ಸೋಮಶೇಖರ್ ಹೇಳಿದರು.30ರ ಬುಧವಾರ ಬೆಳಿಗ್ಗೆ 6ಕ್ಕೆ ಸ್ವಾಮಿಯ ಸನ್ನಿಧಿಯಲ್ಲಿ ಉರುಳು ಸೇವೆ, ಜವುಳ ಕರ‍್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಕರ‍್ತಿಕೋತ್ಸವ, ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದಿಂದ ದೀಪ ರಥೋತ್ಸವ ಕರ‍್ಯಕ್ರಮ ಇದೆ. ಶ್ರೀ ಗುರು ಗದ್ದಿಗೇಶ್ವರ ಸ್ವಾಮಿಯನ್ನು ಕೈಲಾಸ ಸಭಾ ಮಂಟಪಕ್ಕೆ ತಂದು ಪೀಠಾರೋಹಣ ಮಾಡಲಾಗುವುದು. ರಾತ್ರಿ 10ರಿಂದ ಅನ್ನಸಂರ‍್ಪಣೆ ನಡೆಸಲಾಗುವುದು. ಕೂಲಂಬಿ ಗ್ರಾಮದ ಶ್ರೀ ಗದ್ದಿಗೇಶ್ವರ ಭಜನಾ ಮಂಡಳಿ ವತಿಯಿಂದ ದೀಪೋತ್ಸವವನ್ನು ರಾತ್ರಿ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.31ರ ಬೆಳಿಗ್ಗೆ 7ಕ್ಕೆ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ರಾತ್ರಿ 7.30ಕ್ಕೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಎಲ್ಲಾ ಕರ‍್ಯಕ್ರಮಗಳಲ್ಲಿ ರ‍್ವ ಭಕ್ತಾದಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.