ಡಿ.೨ ಕ್ಕೆ ಮಹಿಳೆಯರಿಂದ ಹೂವಿನ ರಥೋತ್ಸವ

ದಾವಣಗೆರೆ. ನ.೩೦; ಶ್ರೀ ಕ್ಷೇತ್ರ ಯರಗುಂಟೆಯ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದಲ್ಲಿ ಡಿ.೨ ರಂದು ಮಧ್ಯಾಹ್ನ ೧೨.೪೫ ಕ್ಕೆ ಮಹಿಳೆಯರಿಂದ  ಹೂವಿನ ರಥೋತ್ಸವ ಜರುಗಲಿದೆ ಎಂದು ಶ್ರೀ ಪರಮೇಶ್ವರ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಶ್ರೀಮಠದಲ್ಲಿ ಕಳೆದ ೧೧ ವರ್ಷದಿಂದ ಮಹಿಳೆಯರಿಂದ ರಥೋತ್ಸವ ಆಯೋಜಿಸುತ್ತಾ ಬರಲಾಗಿದೆ ರಥೋತ್ಸವಕ್ಕೂ ಮುನ್ನ ನಾಳೆ ಬೆಳಗ್ಗೆ ೫ ಕ್ಕೆ ಧ್ವಜಾರೋಹಣ ನಡೆಯಲಿದೆ.ನಂತರ ಮಹಾಗಣಪತಿ ಪೂಜೆ,ನವಗ್ರಹ ಪೂಜೆ,ದುರ್ಗಾಹೋಮ,ಗೋಪೂಜೆ ನಡೆಯಲಿದೆ.ಅಂದು ರಾತ್ರಿ ೮.೩೫ ಕ್ಕೆ ಶ್ರೀಮಠದಿಂದ ಅರಿಶಿಣ ಎಣ್ಣೆ ಕಾರ್ಯಕ್ರಮ ನಂತರ ರಥದ ಕಳಸ ಬರಮಾಡಿಕೊಳ್ಳಲಾಗುವುದು ಎಂದರು.ಡಿ.೨ ರಂದು ಬೆಳಗ್ಗೆ ೬ ಕ್ಕೆ ಶ್ರೀ ವೀರಭದ್ರ ಸ್ವಾಮಿ ಗುಗ್ಗಳ ನಡೆಯಲಿದೆ.ಅಂದು ಬೆಳಗ್ಗೆ ೧೦ ಕ್ಕೆ ಧರ್ಮಸಭೆ ಹಮ್ಮಿಕೊಳ್ಳಲಾಗಿದ್ದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.
ಹಾಲಸ್ವಾಮಿ ಮಠದ ಶ್ರೀ ಬಸವಜಯಚಂದ್ರ ಸ್ವಾಮೀಜಿ ನುಡಿಗಳನ್ನಾಡಲಿದ್ದಾರೆ.ಹಜರತ್ ಸೈಯದ್ ರಹಮತ್ ವುಲ್ಲಾ,ಎಸ್ ಬಿ ಖಾದ್ರಿ,ಹಜರತ್ ಸೈಯದ್ ಖಾದರ್ ಷಾ ಖಾದ್ರಿ ಉಪಸ್ಥಿತರಿರುವರು.ವಿಶೇಷ ಆಹ್ವಾನಿತರಾಗಿ ನಗರದ ಗಣ್ಯರು ಆಗಮಿಸಲಿದ್ದಾರೆ.ಅಂದು ಮಧ್ಯಾಹ್ನ ೧೨.೪೫ ಮಹಿಳೆಯರಿಂದ ಹೂವಿನ ರಥೋತ್ಸವ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹೇಂದ್ರ ಕುಮಾರ್,ಟಿ.ಆರ್ ವಿಜಯಕುಮಾರ್,ನೀರ್ಥಡಿ ಬಸವರಾಜ್,ಎನ್.ಎಸ್ ರಾಜು,ಮಂಜುನಾಥ್, ಎ.ಸಿ ಕರಿಬಸಪ್ಪ ಇದ್ದರು.