ಡಿ. ೨೯: ಮಂಗಳೂರಿನಲ್ಲಿ ’ಪೇಜಾವರ ವಿಶ್ವೇಶತೀರ್ಥ ನಮನ’

ಮಂಗಳೂರು, ಡಿ.೨೭- ಹರಿಪಾದಗೈ ದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಕಲ್ಕೂರ ಪ್ರತಿಷ್ಠಾನವು “ಪೇಜಾವರ ವಿಶ್ವೇಶತೀರ್ಥ ನಮನ-೨೦೨೦” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಡಿ. ೨೯, ಮಂಗಳವಾರ ಸಂಜೆ ೪ ಗಂಟೆಗೆ, ಕದ್ರಿ ಮಲ್ಲಿಕಾ ಬಡವಾಣೆಯ ಮಂಜು ಪ್ರಾಸಾದದ ’ವಾದಿರಾಜ ಮಂಟಪದಲ್ಲಿ ಸಮಾರಂಭ ನಡೆಯಲಿದ್ದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥಸ್ವಾಮೀಜಿಉಪಸ್ಥಿತರಿದ್ದು ಅನುಗ್ರಹ ಭಾಷಣ ಮಾಡಲಿರುವರು.
ಜಿಲ್ಲಾಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಲಿದ್ದು. ಈ ಸಂದರ್ಭ “ಗುರುವಂದನೆ”, ಸಾಧಕ ಶ್ರೇಷ್ಠರಿಗೆ, ’ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಹಾಗೂ ನುಡಿ ನಮನ ಸಲ್ಲಿಸಲಾಗುವುದು. ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ,ವೇ. ಮೂ ಶ್ರೀ ಗಣಪತಿ ಅಚಾರ್ಯ ಕದ್ರಿ, ತುಳು ಜನಪದ ಸಾಹಿತಿ ಪ್ರಾಧ್ಯಾಪಕಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ವಿಶ್ವೇಶತೀರ್ಥ ಶ್ರೀಪಾದಂಗಳವರ “ಸಂಸ್ಮರಣಾ” ಭಾಷಣ ಮಾಡಲಿರುವರು.
ಕೋವಿಡ್-೧೯ರ ಸರಕಾರದ ನಿಯಮಾನುಸಾರ ಕಾರ್ಯಕ್ರಮ ಆಯೋಜಿ ಸಲಾಗಿದ್ದು ಭಜನೆ, ಸಂಗೀತ, ಸತ್ಸಂಗಇತ್ಯಾದಿ ನೆರವೇರಲಿರುವುದೆಂದುಕಲ್ಕೂರ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.