ಡಿ.೨೪ ಬೆಳಕು ಸಂಭ್ರಮ

ರಾಯಚೂರು.ಡಿ.೨೧- ಬೆಳಕು ಸಂಸ್ಥೆಯ ರಾಜ್ಯ ಮಟ್ಟದ ಸಂಭ್ರಮ ಕಾರ್ಯಕ್ರಮ ಡಿ.೨೪ ಭಾನುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಇರಕಲ್ ಮಠದ ಪೀಠಾಧಿಪತಿ ಬಸವ ಪ್ರಸಾದ ಶರಣ ಅವರು ವಹಿಸಿಕೊಳ್ಳಲಿದ್ದಾರೆ. ಸಂಭ್ರಮದ ಸರ್ವಾಧ್ಯಕ್ಷರಾಗಿ ಅಭಯ ಸಮಾಜ ಸೇವಾ ಸಂಸ್ಥೆ ಡಾ. ಅಭಯ ಕೃಷ್ಣಾ ಆಗಮಿಸಲಿದ್ದಾರೆ.
ಜಾನಪದ ಸಮಾಜ ಕಲಾವಿದ ಹಾಗೂ ಸಾಹಿತಿ ಟಿ.ಎಚ್.ಎಂ. ಬಸವರಾಜ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ವಿಶೇಷ ಅಹ್ವಾನಿತರಾಗಿ ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ನಿರ್ಮಲಾ ಸಿ. ಯಲಿಗಾರ ಹಾಗೂ ಡಾ. ಶೀಲಾ ಅಭಯ ಆಗಮಿಸಲಿದ್ದಾರೆ. ಉಳಿದಂತೆ ಶಾಸಕರಾದ ಶಿವರಾಜ ಪಾಟೀಲ್, ದದ್ದಲ್ ಬಸನಗೌಡ, ಮಾಜಿ ಶಾಸಕ ಪಾಪಾರೆಡ್ಡಿ ಆಗಮಿಸಲಿದ್ದಾರೆ.
ಹಲವು ಕ್ಷೇತ್ರದ ಶಾಸಕರಿಗೆ ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲ್, ದೇವೇಂದ್ರಪ್ಪ ಹಡಪದ, ವೀರಹನುಮಾನ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಅನೇಕ ಗಣ್ಯರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕವಿಗೋಷ್ಟಿ ಸಾಂಸ್ಕೃತಿಕ ಜರುಗಲಿವೆ ಎಂದು ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸಂಸ್ಥೆ ಗೌರವ ಸಲಹೆಗಾರ ಮಾರುತಿ ಬಡಿಗೇರ್, ಪದಾಧಿಕಾರಿಗಳಾದ ಮಂಜುನಾಥ, ಮೌನೇಶ ಇದ್ದರು.