ಡಿ.೧೧, ಬೆಂಗಳೂರು ಚಲೋ ಸಮಾವೇಶ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ರಾಯಚೂರು,ನ,೨೧- ತಾಲೂಕಿನ ಬಿಜನಗೇರಿ ಗ್ರಾಮದಲ್ಲಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಡಿ.೧೧ ರಂದು ನಡೆಯುವ ಮಾದಿಗರ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಮುದಾಯ ಜನರಿಗೆ ಕರೆ ನೀಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ರಾಜ್ಯ ಸಮಿತಿ ರವರ ಆದೇಶದಂತೆ. ಜಿಲ್ಲಾ ಸಂಚಾಲಕರ ಸೂಚನೆಯಂತೆ. ರಾಯಚೂರು ನಗರ ಘಟಕ ಸಂಚಾಲಕರ ಸಮಿತಿ ರವರ ನೇತೃತ್ವದಲ್ಲಿ ಕರಪತ್ರ ಬಿಡುಗಡೆ ಮಾಡಿ ಹಾಗೂ ಚಲೋ ಬೆಂಗಳೂರು ಡಿಸೆಂಬರ್ ೧೧ರ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಬಿಜನಗೇರಿ ಗ್ರಾಮದಿಂದ ಆಗಮಿಸಬೇಕೆಂದು. ಜಿಲ್ಲಾ ಸಂಚಾಲಕರ ಸಮಿತಿ ಹಾಗೂ ನಗರ ಸಂಚಾಲಕರ ಸಮಿತಿ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಎ. ರಾಮು ದೇವಿನಗರ ಶರಣಬಸವ .ದುಳ್ಳಯ್ಯ ಗುಂಜಹಳ್ಳಿ ರವಿ ದೇವಿನಪಲ್ಲಿ ಊರಿನ ಹಿರಿಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.