ಡಿ.ಸಿ.ಸಿ ಬ್ಯಾಂಕ್ ಗ್ರಾಹಕ ಸೇವೆ ನೀಡುವಲ್ಲಿ ದೇಶಕ್ಕೇ ಮಾದರಿ ಃ ಮಂಜುಳಾ

ಬೀದರ, ಜು. 15ಃ ಪ್ಯಾಕ್ಸಗಳನ್ನು ಕೇವಲ ಕೃಷಿ ಸಾಲ ವಿತರಿಸುವ ಸಂಸ್ಥೆ ಮಾಡುವ ಬದಲು ತನ್ನ ಸದಸ್ಯರ ಎಲ್ಲಾ ಕೃಷಿ ಮತ್ತು ದಿನನಿತ್ಯದ ಜೀವನಾವಶ್ಯಕÀತೆ ಅಗತ್ಯಗಳನ್ನು ಪೂರೈಸುವ ಬಹು ಉದ್ದೇಶ ಸಹಕಾರಿ ಸಂಘಗಳಾಗಿ ಪರಿವರ್ತಿಸಬೇಕು ಎಂದು ಬೀದರ ಜಿಲ್ಲಾ ಸಹಕಾರಿ ಇಲಾಖೆಯ ಉಪ-ನಿಬಂಧಕರಾದ ಶ್ರೀಮತಿ ಮಂಜುಳಾ ಅವರು ಹೇಳಿದರು.

ಅವರು ಇಲ್ಲಿಯ ಡಾ|| ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬಳ್ಳಾರಿ, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳ ಪ್ಯಾಕ್ಸಗಳÁಡಳಿತ ಮಂಡಳಿ ಸದಸ್ಯರಿಗೆ ನಬಾರ್ಡ ವತಿಯಿಂದ ನಡೆದ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಬೀದರ್ ಡಿ.ಸಿ.ಸಿ ಬ್ಯಾಂಕ್ ಗ್ರಾಹಕ ಸೇವೆಗಳನ್ನು ನೀಡುವಲ್ಲಿ ಮತ್ತು ಪ್ಯಾಕ್ಸ(ಪಿ.ಕೆ.ಪಿ.ಎಸ್.)ಗಳಿಗೆ ಮಾರ್ಗದರ್ಶನ ನೀಡುವುದರಲ್ಲಿ ದೇಶಕ್ಕೇ ಮಾದರಿಯಾಗಿದೆ ಎಂದು ಹೇಳಿದರು.

ಜನರಿಗೂ ಕಮ್ಮಿ ದರದಲ್ಲಿ ವಿಶ್ವಸಾರ್ಹ ಸೇವೆಗಳು ದೊರೆಯುತ್ತವೆ. ಸಹಕಾರಿ ಆಂದೋಲನವು ಬಲಗೊಳ್ಳುತ್ತದೆ. ಸಂಸ್ಥೆಗಳು ಸ್ವಾವಲಂಬಿಗಳಾಗಿ ಬೆಳೆಯುತ್ತವೆ. ಇದಕ್ಕಾಗಿ ಸರಕಾರ ಪ್ಯಾಕ್ಸಗಳ ಬಲವರ್ಧನೆಗಾಗಿ ಹಣಕಾಸಿನ ಸಹಾಯವನ್ನು ಮಾಡುತ್ತಿದೆ. 2030ರ ಒಳಗಾಗಿ ಪ್ಯಾಕ್ಸಗಳು ಬದಲಾಗಬೇಕಾಗಿದೆ. ಕಂಪ್ಯೂಟರೀಕೃತಗೊಳ್ಳಬೇಕಾಗಿದೆ. ಇದಕ್ಕಾಗಿ ಪ್ಯಾಕ್ಸಗಳ ಆಡಳಿತ ಮಂಡಳಿ ಸದಸ್ಯರು ನೂತನ ಕಾಯ್ದೆ-ಕಾನೂನು ತಿಳಿದುಕೊಳ್ಳಬೇಕು. ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದರು.

ಸಂಘಗಳ ಅಭಿವೃದ್ದಿಗೆ ಉತ್ತಮ ನಾಯಕತ್ವ ಬಹಳ ಮುಖ್ಯವಾಗಿದೆ. ಸಭಾ ನಡಾವಳಿಗಳ ಬಗ್ಗೆ ಕೂಲಂಕುಷವಾಗಿ ವಿಚಾರ ಮಾಡಿ ಕಾನೂನು ಬದ್ದವಾದ ನಿರ್ಣಯಗಳಿಗೆ ಒಪ್ಪಿಗೆ ಸೂಚಿಸಬೇಕು. ಸಹಕಾರಿ ಸಂಘಗಳೇ ರಾಜಕೀಯ ನಾಯಕರನ್ನು ಸೃಷ್ಟಿಸುವ ವೇದಿಕೆಗಳಾಗಿವೆ. ಅದಕ್ಕಾಗಿ ಉತ್ತಮ ಭವಿಷ್ಯವನ್ನು ಹೊಂದಿರುವ ಸಹಕಾರಿ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ನಡೆಸಿ, ಊರಿಗೂ ಸಮಾಜಕ್ಕೂ ಮಾದರಿಯಾಗಬೇಕು ಎಂದು ಹೇಳಿದರು.

ಬೀದರ ಡಿಸಿಸಿ ಬ್ಯಾಂಕ ನಿರ್ದೇಶಕ ವಿಜಯ ಕುಮಾರ ಪಾಟೀಲ ಗಾದಗಿಯವರು ಮಾತನಾಡುತ್ತ, ಜನರಿಗೆ ಸರಕಾರಿ ಯೋಜನೆ ತಲುಪಿಸುವ ಕೆಲಸದಲ್ಲಿ ಪ್ಯಾಕ್ಸಗಳು ಕೆಲಸ ಮಾಡಬೇಕು. ಸರಕಾರದಿಂದ ಸಿಗುವ ಕಮ್ಮಿ ಬಡ್ಡಿದರದ ಸಾಲ ನೀಡಿಕೆಯನ್ನು ಎಲ್ಲಾ ರೈತರಿಗೂ ತಲುಪಿಸಿವ ಕೆಲಸ ಮಾಡಬೇಕು. ಸಂಘದಲ್ಲಿ ರಾಜಕೀಯ ಸೇರಿಸಿ ವ್ಯವಸ್ಥೆ ಹಾಳು ಮಾಡಬಾರದು ಎಂದರು.

ನಿರ್ದೇಶಕರಾದ ಮೇಲೆ ಉತ್ತಮ ಕೆಲಸ ಮಾಡುವತ್ತ ಗಮನ ಹರಿಸಬೇಕು. ಪ್ರಧಾನ ಮಂತ್ರಿ ಫಸಲ್-ಬೀಮಾ ಯೋಜನೆ ನೋಂದಣಿಯಲ್ಲಿ ಬೀದರ ರಾಷ್ಟ್ರಕ್ಕೇ ನಂ.1 ಸ್ಥಾನ ಹೊಂದಿದ್ದು, ಬೀದರ ಡಿಸಿಸಿ ಬ್ಯಾಂಕ ಮತ್ತು ಪ್ಯಾಕ್ಸಗಳ ನಡುವಿನ ಹೊಂದಾಣಿಕೆಯುಕ್ತ ಕೆಲಸದಿಂದ ಇದು ಸಾಧ್ಯವಾಗಿದೆ. 9 ಕೋಟಿ ಪ್ರೀಮಿಯಮ್ ಕಟ್ಟಿ, 65 ಕೋಟಿ ಇನ್ಸುರೆನ್ಸ ಬಂದಿದೆ. ಸಂಸ್ಥೆಗಳು ಉತ್ತಮ ಸೇವೆ ನೀಡಿದಲ್ಲಿ ಸದಸ್ಯರು ಸಂಸ್ಥೆಯನ್ನು ಬಿಟ್ಟು ಬೇರೆ ಬ್ಯಾಂಕುಗಳತ್ತ ಹೋಗಲಾರರು. ಸಹಕಾರ ಬ್ಯಾಂಕುಗಳಿಗೆ ಬರುತ್ತಾರೆ. ರೈತರು ಸ್ವಾವಲಂಬಿ ಬದುಕು ಬದುಕಬೇಕೆನ್ನುವ ಉದ್ದೇಶದಿಂದ ಸಾಲ ನೀಡಬೇಕು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಚಳುವಳಿಯಾಗಿ ಸಹಕಾರ-ಚಳುವಳಿಯಿದ್ದು ಸದಸ್ಯರೇ ಇದರ ಮಾಲೀಕರಾಗಿದ್ದಾರೆ. ಸಂಘದಲ್ಲಿ ಆಧುನಿಕ ತಂತ್ರಜಾÐನ, ಮಾತ್ರವಲ್ಲ ಶೃದ್ಧೆ, ನಿಷ್ಟೆ, ಪ್ರಾಮಾಣಿಕತೆ, ಪಾರದರ್ಶಕತೆ ಅಳವಡಿಸಿಕೊಂಡರೆ ಸಹಕಾರ ಕ್ಷೇತ್ರ ಉಳಿಯಲು ಬೆಳೆಯಲು ಸಾಧ್ಯವಿದೆ ಎಂದು ನುಡಿದರು.

ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಚನಬಸಯ್ಯಾ ಸ್ವಾಮಿಯವರು ಮಾತನಾಡುತ್ತ, ಬಹುಸೇವಾ ಕೇಂದ್ರವಾಗಿ ಪ್ಯಾಕ್ಸಗಳನ್ನು ಮಾರ್ಪಡಿಸಿದಾಗ ರೈತರ ಸೇವೆಗಳಿಗೆ ಮಹತ್ವ ಕೊಡಬೇಕು ಲಾಭಕ್ಕಿಂತಲೂ ಸೇವೆಗೆ ಪ್ರಾಧನ್ಯತೆಯಿರಬೇಕು. ಶೇರು ಬಂಡವಾಳ ಸಹಕಾರ ಸಂಘಗಳಿಗೆ ಉಚಿತ ಬಂಡವಾಳವಾಗಿದ್ದು, ಇದನ್ನು ಹೆಚ್ಚಿಸಿದಷ್ಟು ಸಂಘಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ. ಹೆಚ್ಚು ಸದಸ್ಯರನ್ನು ಮಾಡಿ ಶೇರು ಬಂಡವಾಳ ಹೆಚ್ಚಿಸಿಕೊಳ್ಳಬೇಕು. ಸದಸ್ಯರಿಗೆ ಸಾಲ ನೀಡಿ, ಸೇವೆ ಒದಗಿಸಿ, ಸೇವೆ ಮಾಡುವಂತಹ ಹೊಸ ಯೋಜನೆ ರೂಪಿಸಿ ರೈತರ ಮನೆ ಬಾಗಿಲಿಗೆ ಸೇವೆ ತಲುಪಿಸಿ ಎಂದು ಕರೆ ನೀಡಿದರು.

ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಅವರು ಮಾತನಾಡುತ್ತ, ಸಹಕಾರಿ ಬ್ಯಾಂಕಿಂಗನಿಂದ ಸಾಮಾಜಿಕ ನ್ಯಾಯ ಪಾಲನೆಯಾಗುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಗೂ ಬ್ಯಾಂಕಿಂಗ ಸೇವೆ ಸಿಗಲು ಕಾರಣವಾಗುತ್ತದೆ. ಸಹಕಾರಿ ಬ್ಯಾಂಕಿನ ಮಾಲಿಕರು ಕೂಡಾ ಜನರೇ ಆಗಿರುವುದರಿಂದ ಸ್ಥಳೀಯತೆಗೆ ಒತ್ತು ನೀಡಲ್ಪಡುತ್ತದೆ ಎಂದು ಹೇಳಿದರು.

ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು, ಸ್ವಾಗತಿಸಿದರೆ, ಎಸ ಜಿ ಪಾಟೀಲ ವಂದಿಸಿದರು ಅನಿಲ ಪಿ ಕಾರ್ಯಕ್ರಮ ನಿರ್ವಹಿಸಿದರು. ಮಹಾಲಿಂಗ ಸಹಕರಿಸಿದರು.