ಡಿ.ಸಿ ಕಚೇರಿಯಲ್ಲಿ ವಾಲ್ಮಿಕಿ ಜಯಂತಿ

ಬೀದರ:ಅ.31: ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಇಂದು ಮಹರ್ಷಿ ವಾಲ್ಮಿಕಿ ಅವರ ಜಯಂತಿ ಅರ್ಥಪೂರ್ಣವಾಗಿ ಜರುಗಿತು.

ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಹರ್ಷಿ ವಾಲ್ಮಿಕಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಜ್ಯೋತಿ ಬೆಳಗಿಸಿ ಜಯಂತಿಗೆ ಚಾಲನೆ ನೀಡಿದರು. ಈ ವರ್ಷ ಕೋವಿಡ್-19ರ ಅಂಗವಾಗಿ ಅತ್ಯಂತ ಸರಳ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ನಿಯಮಗಳು ಪಾಲಿಸಿ ಜಯಂತಿ ಆಚರಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಸಹಾಯಕ ಆಯುಕ್ತೆ ಗರಿಮಾ ಪನ್ವಾರ್, ತಹಸಿಲ್ದಾರ್ ಗಂಗಾದೇವಿ ಸೇರಿದಂತೆ ಜಿಲ್ಲಾಡಳತಕ್ಕೆ ಸಂಬಂಧಿಸಿದ ಇತರೆ ಅಧಿಕಾರಿಗಳು, ಸಿಬ್ಬಂದಿ ಮತ್ತು ವಾಲ್ಮಿಕಿ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.