ಡಿ.ಸಿ.-ಆರ್.ಸಿ.ಯಿಂದ ಮತ ಎಣಿಕೆ ಕೇಂದ್ರಕ್ಕೆ ಭೇಟಿ:ಪೂರ್ವಸಿದ್ಧತೆ ಕಾರ್ಯ ಪರಿಶೀಲನೆ

ಕಲಬುರಗಿ:ಮೇ.29: ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಜೂನ್ 4 ಮತ್ತು ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಯ ಮತ ಎಣಿಕೆ ಜೂನ್ 6 ರಂದು ಗುಲಬರ್ಗಾ ವಿ.ವಿ ಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುಲಬರ್ಗಾ ವಿ.ವಿ.ಗೆ ಭೇಟಿ ನೀಡಿ ಮತ ಎಣಿಕೆ ಸಿದ್ಧತೆ ಕಾರ್ಯ ಪರಿಶೀಲಿಸಿದರು.

ಲೋಕಸಭಾ ಚುನಾವಣೆಯ ಮತ ಎಣಿಕೆ ವಿವಿಧ ಐದು ಕಟ್ಟಡಗಳಲ್ಲಿ ನಡೆಯಲಿದ್ದು, ಈಶಾನ್ಯ ಪದವೀಧರ ಚುನಾವಣೆಯ ಮತ ಎಣಿಕೆ ಹೇಮರೆಡ್ಡುಮಲ್ಲಮ್ಮ ಸಂಶೋಧನಾ ಕೇಂದ್ರ ಕಟ್ಟಡದಲ್ಲಿ ನಡೆಯಲಿದೆ.

 ಮಹಾನಗರಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಪಾಟೀಲ, ಕಲಬುರಗಿ ತಹಶೀಲ್ದಾರ ಮಧುರಾಜ ಇದ್ದರು.