ಡಿ.ವಿ. ಹಾಲಭಾವಿ ಪ್ರಶಸ್ತಿಗೆ ಹಿರಿಯ ಕಲಾವಿದ ಪ್ರಕಾಶ್ ಗಡಕರ್ ಆಯ್ಕೆ

ಕಲಬುರಗಿ,ಜು.14: ಹಿರಿಯ ಚಿತ್ರಕಲಾವಿದ ಪ್ರಕಾಶ್ ಗಡಕರ್ ಅವರಿಗೆ ಮೈಸೂರು 2022ನೇ ಸಾಲಿನ ಕಲಾಗುರು ಡಿ.ವಿ. ಹಾಲಭಾವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಾಡಿನ ಹೆಸರಾಂತ ಕಲಾವಿದರಾದ ಕಲಾಗುರು ಡಿ.ವಿ. ಹಾಲಭಾವಿಯವರ ಹೆಸರಿನಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದಿಂದ ಧಾರವಾಡದ ಬೆಲ್ಲದ್ ಶಿಕ್ಷಣ ಮತ್ತು ಕೃಷಿ ಪ್ರತಿಷ್ಠಾನದ ಸಹಯೋಗದೊಂದಿಗೆ ಪ್ರತಿ ವರ್ಷಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಪ್ರಸಸ್ತಿಯು ಸ್ವಸ್ತಿ ವಾಚನ, ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರ ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ನಂತರ ಏರ್ಪಡಿಸಲಾಗುವುದು ಎಂದು ಪ್ರತಿಷ್ಠಾನದವರು ತಿಳಿಸಿದ್ದಾರೆ.
ಪ್ರಕಾಶ್ ಗಡಕರ್ ಅವರು ಜಿಲ್ಲೆಯ ವಾಡಿ-ಜಂಕ್ಷನ್‍ನಲ್ಲಿ 1962ರಲ್ಲಿ ಜನಿಸಿದರು. ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಪ್ರೌಢ ಶಿಕ್ಷಣದ ನಂತರ ನಗರದ ದಿ ಐಡಿಯಲ್ ಫೈನ್ ಆರ್ಟ ಇನ್ಸ್ ಟಿಟ್ಯೂಟ್‍ನಲ್ಲಿ 1983 ಜಿ.ಡಿ. ಆರ್ಟ್, 1994ರಲ್ಲಿ ಎಂಎಫ್‍ಎ ಸ್ನಾತಕೋತ್ತರ ಪದವಿ ಪಡೆದರು. ನಂತರ ದಿ ಐಡಿಯಲ್ ಫೈನ್ ಆರ್ಟ್ ಸಂಸ್ಥೆಯ ಎಂಎಂಕೆ ಕಾಲೇಜ್ ಆಫ್ ವಿಜುವೆಲ್ ಆರ್ಟ್ ಕಾಲೇಜಿನಲ್ಲಿ ಊಪನ್ಯಾಸರಾಗಿ ಸೇವೆ ಸಲ್ಲಿಸಿ 2022ರಲ್ಲಿ ನಿವೃತ್ತಿ ಹೊಂದಿದ್ದಾರೆ.
ಗಡಕರ್ ಅವರು ಕಲಾ ಶಿಬಿರ, ರಾಜ್ಯದಲ್ಲಿ ಮತ್ತು ಹೊರ ರಾಜ್ಯದಲ್ಲಿ ಏಕವ್ಯಕ್ತಿ ಹಾಗೂ ಗುಂಪು ಕಲಾಪ್ರದರ್ಶನಗಳವನ್ನು ಮಾಡಿದ್ದಾರೆ. ಹಲವಾರು ಪ್ರಶಸ್ತಿಗಳು ಬಂದಿವೆ. ಗಡಕರ್ ಅವರ ಶಿಷ್ಯರು ಬೇರೆ ಬೇರೆ ರಾಜ್ಯದಲ್ಲಿ ಕಲಾವಿರಾಗಿದ್ದಾರೆ.
ಕರ್ನಾಟಕ ಲಲಿತ ಕಲಾ ಅಕ್ಯಾಡೆಮಿ 2019ರಲ್ಲಿ ಗೌರವ ಪ್ರಶಸ್ತಿ ಪಡೆದಿರುವ ಪ್ರಕಾಶ್ ಗಡಕರ್ ಅವರ ಕಲಾಸೇವೆಯನ್ನು ಗುರುತಿಸಿ, 2022ನೇ ಸಾಲಿನ ಕಲಾಗರು ಡಿ.ವಿ. ಹಾಲಭಾವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಾರಾಯಣ್ ಜೋಶಿ ಅವರು ತಿಳಿಸಿದ್ದಾರೆ.