ಡಿ.ರಾಮನಾಯ್ಕ ಗೆ ಬಳ್ಳಾರಿ ವಿವಿಯಿಂದ ಪಿ.ಎಚ್.ಡಿ  ಗೌರವ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.22 :-  ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಶೋಧನಾ ವಿದ್ಯಾರ್ಥಿ ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರತಾಂಡಾದ  ಡಿ. ರಾಮನಾಯ್ಕ ಪಿ ಹೆಚ್ ಡಿ ಪದವಿ ನೀಡಿ ಗೌರವಿಸಿದೆ.
ತಾಲೂಕಿನ ಶ್ರೀಕಂಠಾಪುರ ತಾಂಡಾದ ಬಡಕುಟುಂಬದ ಬಡ ರೈತ ಕುಟುಂಬದ ಜಯಬಾಯಿ ಡಾಕ್ಯಾನಾಯ್ಕ.ಕೆ.ಎಸ್.ದಂಪತಿಯ ಏಕೈಕ ಪುತ್ರರಾಗಿರುವ ಡಿ ರಾಮನಾಯ್ಕ್ ಕಷ್ಟದ ಜೀವನದಲ್ಲೂ ಉನ್ನತ  ವ್ಯಾಸಂಗ ಮಾಡುತ್ತ
ಪಿಹೆಚ್ ಡಿ  ವ್ಯಾಸಂಗದಲ್ಲಿ ಸಿದ್ದಪಡಿಸಿದ “ಆನ್ ಎಕಾನಾಮಿಕ್ಸ್ ಅನಾಲಿಸಿಸ್ ಆನ್ ಪುಡ್ ಸೆಕ್ಯೂರಿಟಿ ಇನ್ ಕರ್ನಾಟಕ'” ಎಂಬ ವಿಷಯ ಮಹಾ ಪ್ರಬಂಧಕ್ಕೆ ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಪಿಎಚ್. ಡಿ ಪದವಿಯನ್ನು ಪ್ರಧಾನ ಮಾಡಿ ಗೌರವಿಸಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕ ಡಾ.ಶಶಿಧರ ಪಿ ಎಸ್. ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ ರಾಮನಾಯ್ಕ ಡಿ. ಪ್ರಸ್ತುತ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಶ್ರೀಕಂಠಾಪುರತಾಂಡ ಗ್ರಾಮ ನಿವಾಸಿ  ರಾಮನಾಯ್ಕ ಡಿ. ಡಾಕ್ಟರೇಟ್ ಪದವಿ ಪಡೆದ ವಿದ್ಯಾರ್ಥಿಗೆ ಶಿಕ್ಷಕರು. ಗ್ರಾಮಸ್ಥರು ಯುವಕರು ಅಭಿನಂದಿಸಿದ್ದಾರೆ.