ಡಿ.ಮಲ್ಲಾಪುರದಲ್ಲಿ ನಾಟಕ ಪ್ರದರ್ಶನ


(ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.23: ಸಂಡೂರು ತಾಲೂಕಿನ ಡಿ.ಮಲ್ಲಾಪುರದಲ್ಲಿ ಸುಗಮ ಸಂಗೀತ ನಾಟಕ ಪ್ರದರ್ಶನ ಜರುಗಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮರ್ಥ ಅಸೋಸಿಯೇಷನ್ ಬೊಮ್ಮಘಟ್ಟ ಇವರ ಪ್ರಯೋಜನ ಕಾರ್ಯಕ್ರಮದಡಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಗುರು ನಾಗಮೂರ್ತಿ, ಗ್ರಾಮದ ಹಿರಿಯರಾದ ಬುಡ್ಡಪ್ಪ, ಗೋಪಾಲಣ್ಣ,  ಸುಂಕಪ್ಪ, ತಮಟೆ ಬಾರಿಸುವ ಮೂಲಕ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೋಪಾಲಣ್ಣ ಮಾತನಾಡಿ, ಮುಂದಿನ ಪೀಳಿಗೆಗೆ ರಂಗಭೂಮಿ ಉಳಿಸಬೇಕಾಗಿದೆ ಆದರೆ ಇವತ್ತಿನ ದಿನಮಾನಗಳಲ್ಲಿ ಕಲೆಗಳು  ಕಣ್ಮರೆಯಾಗುತ್ತವೆ ಕಲೆಗಳನ್ನು ನಾವೆಲ್ಲ ಉಳಿಸಿ ಬೆಳೆಸಬೇಕಾಗಿದೆ ಎಂದರು.
ಹಳ್ಳಿಗಾಡಿನಲ್ಲಿ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡುವುದರಿಂದ ನಮ್ಮ ಮೂಲ ಕಲೆಗಳು ಉಳಿವಿಗೆ ಕಲಾವಿದ ಕೆಲಸ ಮಾಡಬೇಕಾಗಿದೆ ಇನ್ನು ಅನೇಕ ಕಲಾವಿದರು ಮೂಲ ಕಲೆಗಳನ್ನು ಬಿಟ್ಟು ಕರೋಕೆ ಸಾಂಗ್ ಮೈಗೂಡಿಸಿಕೊಂಡು ಹಾಡುದಿದ್ದಾರೆ ಹಾಗಾಗಿ ವಾದ್ಯಗಳು ಮೂಲಿ ಗುಂಪು ಮಾಡುತ್ತಿದ್ದಾರೆ ಹಾಗಾಗಿ ನಮ್ಮ ಹಳ್ಳಿಗಾಡಿನ ಸೊಗಡು ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ನಂತರ ಕೊನೆಯದಾಗಿ ಹನುಮಯ್ಯ ಮತ್ತು ತಂಡ ತಿಮ್ಲಾಪುರ್ ಇವರಿಂದ ಸುಗಮ ಸಂಗೀತ ನಡೆಸಿಕೊಟ್ಟರು ಮತ್ತು ಧನಂಜಯ ಮರಿಯಮ್ಮನಹಳ್ಳಿ ಇವರಿಂದ ನಾಟಕ ಕಾರ್ಯಕ್ರಮ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಎಚ್ ಜಿ ಸುಂಕಪ್ಪ ಬಿ ಆನಂದ ಡಿ ಹೇಮಂತ ಎಲ್ ಕೊಟ್ರೇಶ ತಿರುಮಲೇಶ ಅಶ್ವಿನಿ ಹುಲಗಪ್ಪ ಎಸ್ ಎಂ ಇನ್ನು ಮುಂತಾದವರು ಭಾಗವಹಿಸಿದ್ದರು.