ಡಿ.ಬಿ. ಶಶಿಕುಮಾರ್  ಗೆ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ.    

ದಾವಣಗೆರೆ.ಜ.೧೬; ಅಂತರಾಷ್ಟ್ರೀಯ ಕ್ರೀಡಾಪಟು, ಹಾಗೂ ಸಹಾಯಕ ಸಾಹಸ ತರಬೇತಿದಾರ ಡಿ.ಬಿ .ಶಶಿಕುಮಾರ್ ಅವರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಕೊಡಮಾಡುವ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸ್ಥಾನಗಳಿಸಿರುವ ಹಾಗೂ ಪರಿಸರ ರಕ್ಷಣೆ, ಸಾಹಸ  ಚಟುವಟಿಕೆಗಳ ಸೇವೆಯನ್ನು ಪರಿಗಣಿಸಿ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್.ಬಾಲಾಜಿ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿ ಮುಳ್ಳು ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ,ಜನವರಿ 18ರಂದು ದ.ಕ. ಜಿಲ್ಲೆಯ ಶ್ರೀ ಕ್ಷೇತ್ರ  ಸುಬ್ರಹ್ಮಣ್ಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಜ್ಯ ಯುವ ಸಮ್ಮೇಳನ ಸಾಂಸ್ಕೃತಿಕ ಯುವ ವೈಭವ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ. ಡಿ.ಬಿ.ಶಶಿಕುಮಾರ್    ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷರಾದ ಎನ್ ಕೆ ಕೊಟ್ರೇಶ್ ತಿಳಿಸಿದ್ದಾರೆ