ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

ಬೆಂಗಳೂರು, ಅ 31 – ರಾಜರಾಜೇಶ‍್ವರಿ ನಗರ ವಿಧನಾಸಭಾ ಕ್ಷೇತ್ರದ ಉಪ ಚುನಾವಣಾ ಕಣದ ರಂಗು ಸಿನಿಮಾ ನಟ, ನಟಿಯರ ಪ್ರಚಾರದಿಂದ ಮತ್ತಷ್ಟು ಏರಿದೆ.

ನಟ ದರ್ಶನ್ ಹಾಗೂ ನಟಿ ಅಮೂಲ್ಯ ಶುಕ್ರವಾರ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದರು. ಈ ವೇಳೆ ನಟ ದರ್ಶನ್ ಗೆ ಜನರಿಂದ ದೊರೆತ ಪ್ರತಿಕ್ರಿಯೆಗೆ, ಸ್ವಾಗತಕ್ಕೆ ನಟಿ ಅಮೂಲ್ಯ ಬೆರಗಾಗಿದ್ದಾರೆ. ಹೀಗಂತ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

“ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನಿಸಿತು ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ. ನಿಮ್ಮ ಅಭಿಮಾನಿ ಬಳಗವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ” ಅಂತಾ ಬರೆದುಕೊಂಡಿದ್ದಾರೆ.

ಅಮೂಲ್ಯ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. “ದರ್ಶನ್ ಅವರ ಗತ್ತು ಇಡೀ ಕರ್ನಾಟಕ ಅಲ್ಲ ಇಡೀ ದೇಶಕ್ಕೆ ಗೊತ್ತು ನಮ್ಮ #ಡಿಬಾಸ್ ಅಭಿಮಾನಿಗಳ ಪಾಲಿಗೆ ಅವರೇ ನಮ್ಮ ಒಡೆಯ. ಗಜ. ಜೈ ಬಾಕ್ಸ್ ಆಫೀಸ್ ಸುಲ್ತಾನ್ ಗೆ ಜೈ ಡಿ ಬಾಸ್” ಎಂದು ಓರ್ವ ಅಭಿಮಾನಿ ಉತ್ತರಿಸಿದ್ದಾರೆ.

“ಸ್ನೇಹ, ಪ್ರೀತಿ, ಸರಳತೆ, ನಂಬಿಕೆ, ಗೌರವಕ್ಕೆ ದರ್ಶನ್ ಮತ್ತೊಂದು ಹೆಸರು” ಎಂದು ಇನ್ನೋರ್ವ ಅಭಿಮಾನಿ ಹೇಳಿಕೊಂಡಿದ್ದಾರೆ.