
(ಸಂಜೆವಾಣಿ ವಾರ್ತೆ)
ಔರಾದ :ಆ.22: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ನಾಡಿನ ಶೋಷಿತ, ದಲಿತ ಮತ್ತು ಹಿಂದುಳಿದ ವರ್ಗಗಳ ಪಾಲಿನ ಧ್ವನಿಯಾಗಿದ್ದರು ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅಭಿಪ್ರಾಯಪಟ್ಟರು.
ಪಟ್ಟಣದ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 108ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್ ಅಂಬೇಡ್ಕರ್ ಸಂವಿಧಾನದಲ್ಲಿ ಕಲ್ಪಿಸಿದ್ದ ಎಲ್ಲಾ ಕಾನೂನುಗಳನ್ನು ಜಾರಿಗೆ ತರಲು ಅರಸುರವರು ಶಕ್ತಿಮೀರಿ ಪ್ರಯತ್ನಪಟ್ಟರು ಎಂದು ಹೇಳಿದರು.
ಶಾಂತಿವರ್ಧಕ ಕಾಲೇಜು ಪ್ರಾಚಾರ್ಯ ಶಿವಾಜಿ ಆರ್.ಎಚ್ ಮಾತನಾಡಿ, ಉಳುವವನೇ ಭೂಮಿ ಒಡೆಯ, ಸೂರಿಲ್ಲದವರಿಗೆ ಸೂರು, ಭಾಗ್ಯ ಜ್ಯೋತಿ, ಬಿಸಿಯೂಟ ಯೋಜನೆ ಜಾರಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲಬೇಕು. ಎಲ್.ಜಿ.ಹಾವನೂರು ಅವರಂತಥ ಜ್ಞಾನಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಿ ಹಿಂದುಳಿದ ವರ್ಗಗಳಿಗೆ ಬಲ ತುಂಬಿದ ಅರಸು ಸದಾ ಆದರ್ಶಪ್ರಾಯರು.
ಬಿಸಿಎಂ ವಿಸ್ತಿರ್ಣಾಧಿಕಾರಿ ರವೀಂದ್ರ ಮೇತ್ರೆ ಮಾತನಾಡಿ, ಧ್ವನಿಯಿಲ್ಲದ ತಳ ಸಮುದಾಯಗಳಿಗೆ ಅರಸು ಅಧಿಕಾರದ ಗದ್ದುಗೆ ನೀಡಿ ಮುಖ್ಯವಾಹಿನಿಗೆ ತಂದರು. ಅಲ್ಲದೇ, ಹಲವು ಯೋಜನೆಗಳು ಮತ್ತು ಅನೇಕ ಮುತ್ಸದಿ ರಾಜಕಾರಣಿಗಳನ್ನು ರಾಜಕೀಯಕ್ಕೆ ಪರಿಚಯಿಸಿದರು. ನಾಡಿನ ಅಖಂಡತೆಗೆ ಅಭಿವೃದ್ಧಿಗೆ ಅರಸು ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಅಲ್ಪಸಂಖ್ಯಾತ ತಾಲೂಕು ವಿಸ್ತಿರ್ಣಾದಿಕಾರಿ ಶಿವಕುಮಾರ ಕುಪ್ಪೆ, ಪಿಎಸ್‍ಐ ರೇಣುಕಾ ಭಾಲೇಕರ್, ಬಿಇಒ ಮಕ್ಸೂದ್ ಅಹಮದ್ ಸೇರಿದಂತೆ ಇನ್ನಿತರರಿದ್ದರು.