ಡಿ.ದೇವರಾಜ ಅರಸು ಪ್ರಶಸ್ತಿ ಸಮಿತಿ ಸದಸ್ಯರಾಗಿ ವಿಜಯ ಭಾಸ್ಕರ್ ನೇಮಕ

ರಾಯಚೂರು,ಆ.೪-೨೦೨೨-೨೩ ಸಾಲಿನಲ್ಲಿ ಡಿ.ದೇವರಾಜ ಅರಸು ರವರ ೧೦೭ ನೇ ಜನ್ಮ ದಿನಾಚರಣೆ ಅಂಗವಾಗಿ ಡಿ.ದೇವರಾಜ ಅರಸು ಪ್ರಶಸ್ತಿಗೆ ಅರ್ಹರನ್ನು ಶಿಫಾರಸ್ಸು ಮಾಡಲು ಸಮಿತಿಯನ್ನು ರಚಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ವಿ.ಅಕ್ಕ ಮಹಾದೇವಿ ಅವರು ಆದೇಶಿಸಿದ್ದಾರೆ.
ಶಿವಮೊಗ್ಗ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ. ಗುರುಲಿಂಗಯ್ಯ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಸದಸ್ಯರನ್ನಾಗಿ ರಾಯಚೂರಿನ ಸಾಮಾಜಿಕ ಕಾರ್ಯಕರ್ತ ವಿಜಯ ಭಾಸ್ಕರ್ , ಕಲಬುರ್ಗಿ ಕೇಂದ್ರ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ.ರೋಹಿನಾಕ್ಷ, ಡಾ.ಕೇಶವ ಬಂಗೇರ, ಡಾ.ವನಜಾ ಶ್ರೀರಾಮ, ಡಾ.ಶ್ರೀಕಾಂತ್ ಹೆಳವಾರ್ ಇವರನ್ನು ಮಾಡಲಾಗಿದೆ.