ಡಿ.ದೇವರಾಜ ಅರಸುರವರ ೪೧ನೇ ಪುಣ್ಯ ಸ್ಮರಣೆ

ರಾಯಚೂರು,ಜೂ.೦೭-
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಜೂ. ೦೬ ರಂದು ಡಿ.ದೇವರಾಜ ಅರಸು ರವರ ೪೧ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಗುಡ್ಡಪ್ಪ ಜಿಗಳಿಕೊಪ್ಪ ಇವರು ಡಿ. ದೇವರಾಜು ಅರಸು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಹಿಂದುಳಿದ ವರ್ಗಗಳ ಹರಿಕಾರನಾಗಿ ದೂರದೃಷ್ಟಿಯುಳ್ಳ ನಾಯಕರಾಗಿ ವಿಶೇಷವಾಗಿ ಕರ್ನಾಟಕದ ತುಳಿತಕ್ಕೊಳಗಾದ ಹಿಂದುಳಿದ ವರ್ಗಗಳನ್ನು ಸುಧಾರಣೆ ಮಾಡಿದರು ಎಂದು ಅನಿಸಿಕೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾದ ಪಂಕಜಾ, ಲೆಕ್ಕಾಧೀಕ್ಷಕರಾದ ಸಂಧ್ಯಾ, ಎಸ್.ಪಿ. ಕಚೇರಿ ಮೇಲ್ವಿಚಾರಕರಾದ ಸಂಗನ ಬಸಪ್ಪ ಬಿರಾದಾರ್, ಯಲ್ಲಪ್ಪ ಗೌಳಿ, ಹನುಮಂತಪ್ಪ, ಅಮೃತಾಶ್ರೀ, ಸುಮನ್, ಸುಧಾ, ಸತೀಶ, ರಾಜು, ಬನಶಂಕರ್, ಆಂಜನೇಯ್ಯ ಮುಂತಾದ ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.