
ಮಾನ್ವಿ,ಆ.೨೧-
ಪಟ್ಟಣದ ಟೌನ್ ಹಾಲ್‌ನಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಡಿ.ದೇವರಾಜು ಅರಸು ರವರ ೧೦೮ನೇ ಜನ್ಮ ದಿನಾಚರಣೆಯನ್ನು ಮಾಡಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ತಹಸೀಲ್ದಾರ್ ರಾಜು ಪಿರಂಗಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ರವರು ರಾಜ್ಯಕಂಡ ಅತ್ಯಂತ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದು ಅವರು ತಮ್ಮ ಆಡಳಿತದ ಅವಧಿಯಲ್ಲಿ ರಾಜ್ಯದ ಬಡಜನರ ಹಾಗೂ ಹಿಂದುಳಿದವರ ಕಲ್ಯಾಣಕ್ಕಾಗಿ ಹಾಕಿಕೊಂಡ ಕಾರ್ಯಕ್ರಮಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ ಎಂದು ತಿಳಿಸಿದರು. ಉಪನ್ಯಾಸಕ ಸುರೇಶ ಕುಮಾರ ಡಿ.ದೇವರಾಜು ಅರಸು ರವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರತಿಭವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಬಸವ ವೃತ್ತದಿಂದ ಟೌನ್‌ಹಾಲ್ ವರೆಗೆ ಡಿ.ದೇವರಾಜು ಅರಸು ರವರ ಭಾವಚಿತ್ರವನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್,ತಾ.ಬಿ.ಸಿ.ಎಂ.ಇಲಾಖೆಯ ಅಧಿಕಾರಿ ನೀಲಮ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೆಂಕಟೇಶ ನಾಯಕ, ಟಿ.ಎ.ಪಿ.ಸಿ.ಎಂ.ಸಿ. ಅಧ್ಯಕ್ಷ ತಿಮ್ಮರೆಡ್ಡಿ ಭೋಗವತಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಸಲೀಂ ಪಾಷಾ, ಶಿವರಾಜ ನಾಯಕ ವಕೀಲರು, ಪ.ವರ್ಗಗಳ ಇಲಾಖೆಯ ತಾ.ಅಧಿಕಾರಿ ಮಹಾಲಿಂಗ ಹಿಂಗಳದಾಳ್ ಹಿಂದುಳಿದ ಜಾತಿ ಒಕ್ಕೂಟದ ಅಧ್ಯಕ್ಷ ಪ್ರವೀಣಕುಮಾರ್, ಅಕ್ಷರದಾಸೋಹ ಅಧಿಕಾರಿ ಸುರೇಶನಾಯಕ, ಪುರಸಭೆ ಸದಸ್ಯ ಬಾಷ, ನರಸಿಂಹ ಹೇಳವರ್,ನಾಗರಾಜ, ಭೂದಾನಿ ಹುಸೇನಪ್ಪ, ಸೇರಿದಂತೆ ಇನ್ನಿತರರು ಇದ್ದರು.