ಡಿ.ಜೆ.ಗಿಲ್ಲಾ ಪರವಾನಿಗೆ – ಡಿವೈಎಸ್ ಪಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ.14 :- ಸುಪ್ರೀಂ ಕೋರ್ಟ್ ಆದೇಶದಂತೆ  ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿ.ಜೆ.ಗೆ ಪರವಾನಿಗೆ ನೀಡುವುದಿಲ್ಲ ಎಂದು ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ಪೊಲೀಸ್ ಠಾಣಾವತಿಯಿಂದ ಆಯೋಜಿಸಿದ ಗಣೇಶೋತ್ಸವ ನಿಮಿತ್ತ ಕರೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಡಿಜೆ ಶಬ್ದದಿಂದಾಗಿ ಹೃದಯರೋಗಿಗಳ, ವೃದ್ಧರ ಹಾಗೂ ಮಕ್ಕಳ ಆರೋಗ್ಯದಲ್ಲಿ ಏರುಪೇರುಗಳಾಗಬಹುದು ಅಲ್ಲದೆ ಶಾಂತಿಕದಡುವ ವಾತಾವರಣ ಸಹ ನಿರ್ಮಾಣವಾಗಬಹುದು ಎನ್ನುವ ನಿಟ್ಟಿನಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಲಾಗಿದೆ ಗಣೇಶ ಪ್ರತಿಷ್ಠಾಪನ ಮಂಡಳಿಯ ಪದಾಧಿಕಾರಿಗಳು ಯಾವುದೇ ಅನಾಹುತಕ್ಕೆ ಆಸ್ಪದ ನೀಡದಂತೆ ಶಾಂತರೀತಿಯಲ್ಲಿ ಹಬ್ಬದ ಆಚರಣೆಯನ್ನು ಸರ್ಕಾರದ ನಿಯಮ ನಿಬಂಧನೆ ಅಡಿಯಲ್ಲಿ ಆಚರಿಸಿ ಎಂದು ತಿಳಿಸಿದರು.
ಕೂಡ್ಲಿಗಿ ಸಿಪಿಐ ಸುರೇಶ ತಳವಾರ ಮಾತನಾಡಿ ಗಣೇಶ ಉತ್ಸವ ಆಚರಣೆ ಯಾವುದೇ ಕೋಮುಗಲಭೆಗೆ ತಿರುಗದಂತೆ ನೋಡಿಕೊಳ್ಳುವುದು ಉತ್ಸವ ಮಂಡಳಿ ಜವಾಬ್ದಾರಿಯಾಗಿರುತ್ತದೆ ಡಿಜೆ ಶಬ್ದದಿಂದ ವಯೋವೃದ್ದರು ಹಾಗೂ ಹೃದಯ ರೋಗಿಗಳ ಎದೆ ಬಡಿತದ ಏರುಪೇರಿನಿಂದ ಸಾವು ನೋವುಗಳು ಅನುಭವಿಸಬಹುದು ಮುನ್ನೆಚ್ಚರಿಕೆಯಾಗಿ ಡಿಜೆ ಪರವಾನಿಗೆ ನೀಡುವುದಿಲ್ಲವಾಗಿದೆ ಎಂದರು ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮಪಂಚಾಯಿತಿ ಕಡೆಯಿಂದ ಸ್ಥಳದ ಕುರಿತಾದ ಪರವಾನಿಗೆ ಪಡೆದುಕೊಂಡು ನಂತರ ಧ್ವನಿವರ್ಧಕ ಪರವಾನಿಗೆ ಸಿಪಿಐ ಕಚೇರಿಯಿಂದ, ಬೆಂಕಿ ಅನಾಹುತ ತಪ್ಪಿಸುವ ಮುಂಜಾಗ್ರತ ಕ್ರಮವಾಗಿ ಹಾಗೂ ವಿದ್ಯುತ್ ಸಂಪರ್ಕದ ಬಳಕೆ ಕುರಿತಾಗಿ ಪರವಾನಿಗೆ ವಿವರ ಮತ್ತು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಹೋಗುವ ಮಾರ್ಗವನ್ನು ಕೊಡುವ ಪರವಾನಿಗೆ ಅರ್ಜಿಯಲ್ಲಿ ನಮೂದಿಸಿ ಎಂದು ತಿಳಿಸಿದರು.
ಪ ಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ ಗಣೇಶೋತ್ಸವಕ್ಕೆ ಸ್ಥಳ ಪರಿಶೀಲನೆ ನಡೆಸಿ ಅಲ್ಲಿಯ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ತಿಳಿಯಬೇಕು ಅಲ್ಲದೆ ಗಣೇಶ ವಿಸರ್ಜನೆಗೆ ಪಟ್ಟಣದ ಸರ್ಕಾರಿ ಜೂನಿಯರ ಕಾಲೇಜ್ ಮೈದಾನ ಆವರಣದ ಮೂಲೆಯೊಂದರಲ್ಲಿ ಗಣೇಶ ವಿಸರ್ಜನೆಗೆ ಪ್ರತಿವರ್ಷದಂತೆ ಈ ವರ್ಷವೂ ಸಹ ಗುಂಡಿತೋಡಿ ಆದರಲ್ಲಿ ನೀರುಬಿಟ್ಟು ಗಣೇಶ ವಿಸರ್ಜನೆಗೆ ಅನುಕೂಲ ಮಾಡಲಾಗಿದೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಆವರಣದ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಬಂದೋಬಸ್ತ್ ಹಾಗೂ ಪರವಾನಿಗೆ ಬಗ್ಗೆ ಪಿಎಸ್ಐ ಧನುಂಜಯ, ಬೆಂಕಿ ಅನಾಹುತ ತಪ್ಪಿಸುವ ಕುರಿತುಅಗ್ನಿ ಶಾಮಕ ಠಾಣೆಯಿಂದ ಎಸ್ ಎಂ ಪಾಷಾ  ಏಳೆoಟು ನಿಬಂಧನೆಗಳನ್ನು ತಿಳಿಸಿದರೆ ಕೂಡ್ಲಿಗಿ ಜೆಸ್ಕಾಂ ಎಇಇ ಪ್ರಕಾಶ ಪತ್ತೇನೂರು ವಿದ್ಯುತ್ ಬಳಕೆ ಕುರಿತು ಅದಕ್ಕೆ ತಗುಲುವ ವೆಚ್ಚಗಳ ಕುರಿತಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಆಡಳಿತ ಸೌಧದ  ಗ್ರೇಡ್ 2 ತಹಸೀಲ್ದಾರ್ ಕುಮಾರಸ್ವಾಮಿ, ಅಗ್ನಿಶಾಮಕ ಠಾಣಾಧಿಕಾರಿ ಎಸ್ ಎಂ ಪಾಶ, ಜೆಸ್ಕಾಂ ಎಇಇ ಪ್ರಕಾಶ ಪತ್ತೇನೂರು ಕಾವಲ್ಲಿ ಶಿವಪ್ಪ ನಾಯಕ, ವೀರಭದ್ರಪ್ಪ ಹಡಗಲಿ, ಕೂಡ್ಲಿಗಿ ಸಾರಿಗೆ ಸಂಸ್ಥೆಯ  ರಮೇಶ್, ಅಜ್ಜಯ್ಯ, ಕೊಟ್ರೇಶ, ಪ ಪಂ ಸದಸ್ಯ ಸಿರಿಬಿ ಮಂಜುನಾಥ, ಜಯರಾಮನಾಯಕ,ಗುರಿಕಾರ ರಾಘವೇಂದ್ರ, ಮಹೇಶ, ವೆಂಕಟೇಶ, ಟೋಪಿ ಸುರೇಶ, ಶಾಮಿಯಾನ ಚಂದ್ರು, ಭರತ್  ರಾಮ,ಇತರರು ಉಪಸ್ಥಿತರಿದ್ದರು.