ಡಿ‌.ಜಿ.ಸಾಗರ್ ಬಣದಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ.ಡಿ.ಜಿ.ಸಾಗರ್ ಬಣದಿಂದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132 ನೇ ಜಯಂತಿ ಅಂಗವಾಗಿ  ಇಂದು ನಗರದ ಅಂಬೇಡ್ಕರ್ ಭವನದಲ್ಲಿನನ ಅಂಬೇಡ್ಕರ್ ವಿಗ್ರಹಕ್ಕೆ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಎ.ಮಾನಯ್ಯ ನೇತೃತ್ವದಲ್ಲಿ ಪುಷ್ಪ ನಮನ ಸಲ್ಲಿಸಲಾಯ್ತು.
ಈ ಸಂದರ್ಭದಲ್ಲಿ ಮೇಯರ್ ತ್ರಿವೇಣಿ ಸೂರಿ, ಕಾಂಗ್ರೆಸ್ ಮುಖಂಡ ವೆಂಕಟೇಶ್ ಪ್ರಸಾದ್, ದಲಿತ ಮುಖಂಡ ನರಸಪ್ಪ, ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಸಿದ್ದೇಶ್, ಜಿ.ಪಂಪಾಪತಿ, ಕೆ.ಗಾದಿಲಿಂಗಪ್ಪ, ಎ.ಕೆ.ನಿಂಗಪ್ಪ, ಹೆಚ್.ನಾಗೇಂದ್ರಪ್ಪ, ಗಂಗಾಧರ, ಮಲ್ಲಿಕಾರ್ಜುನ,ಹೆಚ್.ಆಂಜನೇಯ, ಭೀಮಾಶಂಕರ, ಟಿ.ಎಂ.ಎರ್ರಿಸ್ವಾಮಿ, ಹೆಚ್.ರಮೇಶ್ , ಹೆಚ್.ಮಲ್ಲಪ್ಪ, ಹೆಚ್.ಶಂಕರ್, ಹೆಚ್.ರಂಗಪ್ಪ, ಮಹೇಶ್ ಭತ್ರಿ, ಶಿವು ಅಸುಂಡಿ,ಪ್ರತಾಪ್,ಸಿದ್ದಪ್ಪಗೌಡ ಮತ್ತಿತರರು ಇದ್ದರು‌

One attachment • Scanned by Gmail