ಡಿ ಗ್ರೂಪ್ ನೌಕರರ ಸೇವೆ ಮುಂದುವರೆಸಲು ಒತ್ತಾಯ

ರಾಯಚೂರು.ಏ.೧೯- ಕೋವಿಡ್ -೧೯ ಡಿ ಗ್ರೂಪ್ ಸಿಬ್ಬಂದಿಗಳ ಹುದ್ದೆಯನ್ನು ಸಕಾರದ ಆದೇಶದಂತೆ ಮುಂದುವರೆಸಬೇಕೆಂದು ಒತ್ತಾಯಿಸಿ ಆಲ್ ಇಂಡಿಯಾ ದಲಿತ ಸೇನೆ ಮುಖಂಡರು ಜಿಲ್ಲೆಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಓಪೆಕ್ ಮತ್ತು ರಿಮ್ಸ್ ಸಿಬ್ಬಂದಿ ಕೋವಿಡ್ -೧೯ ಡಿ ಗ್ರೂಪ್ ನೌಕರರನ್ನು ದಿ. ೧೨-೦೨-೨೦೨೧ ರಂದು ಯಾವುದೇ ಮುನ್ಸೂಚನೆ ನೀಡದೇ ತೆಗೆದು ಹಾಕಿದರೆಂದು ದೂರಿದರು.
ಆದೇಶದ ಪ್ರಕಾರ ಸೆ.೨೦೨೧ ರವರೆಗೆ ಮುಂದುವರೆಸಲು ಸ್ಪಷ್ಟ ಆದೇಶ ಇದ್ದರೂ ಕೂಡ ಉದ್ದೇಶ ಪೂರ್ವಕವಾಗಿ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪೂರ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಇವರು ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಕೋವಿಡ್-೧೯ ಸಿಬ್ಬಂದಿಗಳಿಗೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಕೂಡಲೇ ಆದೇಶವನ್ನು ಹೊರಡಿಸಿ ಕೋವಿಡ್-೧೯ ಡಿ ಗ್ರೂಪ್ ನೌಕರರ ಸೇವೆಯನ್ನು ಸರ್ಕಾರದ ಆದೇಶದಂತೆ ಮುಂದುವರೆಸಿ ಆದೇಶಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಯಮವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.