ಡಿ ಗ್ರೂಪ್‌ಗಳಿಗೆ ನೇಮಕಾತಿ ಕಲ್ಪಿಸಲು ಸರ್ಕಾರಕ್ಕೆ ಆಗ್ರಹ

ಕೋಲಾರ,ಜ.೪- ಜಿಲ್ಲೆಯ ಎಲ್ಲಾ ಗ್ರಾಪಂ ಲೋಕ ಶಿಕ್ಷಣ ಶಿಕ್ಷಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿರುವ ಪ್ರೇರಕರಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರ ಸಭಾ ನಡುವಳಿಯ ಆದೇಶದಂತೆ ಸಿ ಮತ್ತು ಡಿ ಗ್ರೂಪ್‌ಗಳಿಗೆ ನೇಮಕಾತಿ ಕಲ್ಪಿಸಿ ಪ್ರೇರಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾ ಸಾಕ್ಷರತಾ ಪ್ರೇರಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷ ಆರ್.ಎಸ್.ಚಂದ್ರಶೇಖರ್ ಸರಕಾರವನ್ನು ಒತ್ತಾಯಿಸಿದರು.
ನಗರದ ಸರ್ವಜ್ಞ ಉಧ್ಯಾನವನದ ಆವರಣದಲ್ಲಿ ಜಿಲ್ಲಾ ಸಾಕ್ಷರತಾ ಪ್ರೇರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಅನಕ್ಷರಸ್ಥರಲ್ಲಿ ಅಕ್ಷರ ಜ್ಞಾನವನ್ನು ಬಿತ್ತುವುದರ ಮೂಲಕ ಅವರನ್ನು ಸಮಾಜದ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರೇರಕರ ಪಾತ್ರ ಬಹಳ ಮಹತ್ತರವಾಗಿದೆ. ಅನಕ್ಷರಸ್ಥರಿಗೆ ಓದು, ಬರಹ, ಲೆಕ್ಕಾಚಾರ ಅಲ್ಲದೆ, ಸಮಾಜವು ಸವಾಂಗೀಣವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಪ್ರೇರಕರು ತೊಡಗಿಸಿಕೊಂಡು ಕೆಲಸ ಮಾಡಿದ್ದಾರೆ ಎಂದರು
ಪರಿಸರ ಸಂರಕ್ಷಣೆ, ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಸರಕಾರದ ಹಲವು ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜತೆಗೆ ಸರಕಾರದ ವಿವಿಧ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಕ್ಕೂ ಮೊದಲು ಶೇ. ೫೫ ರಷ್ಟು ಇದ್ದಿದ್ದು, ಕಾರ್ಯಕ್ರಮ ಅನುಷ್ಠಾನಗೊಂಡು ಪ್ರೇರಕರ ಕಾರ್ಯದಕ್ಷತೆಯಿಂದ ಶೇ.೮೦ ಕ್ಕೆ ಏರಿಕೆಯಾಗಿದೆ. ಆದರೆ ಸಾಕ್ಷರತಾ ಕಾರ್ಯಕ್ರಮವು ೨೦೧೭ ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಂಡಿರುವುದರಿಂದ ಪ್ರೇರಕರಾಗಿ ಕಾರ್ಯನಿರ್ವಹಿಸಿದವರು ಬೀದಿಗೆ ಬೀಳುವಂತಾಗಿದೆ. ಅವರನ್ನು ನಂಬಿಕೊಂಡಿರುವ ಕುಟುಂಬದ ಸದಸ್ಯರ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.
ಜಿಲ್ಲೆಯಲ್ಲಿ ೨೦೦೩ ರಿಂದ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ೨೦೧೭ ರವರೆಗೂ ನಡೆದಿದೆ. ಈ ಅವಧಿಯಲ್ಲಿ ಸರಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಪ್ರತಿ ಗ್ರಾಪಂ ಲೋಕ ಶಿಕ್ಷಣ ಶಿಕ್ಷಣ ಕೇಂದ್ರಗಳಲ್ಲಿ ಇಬ್ಬರು ಪ್ರೇರಕರು ತಲಾ ೨ ಸಾವಿರ ರೂ.ಗಳ ಗೌರವಧನಕ್ಕೆ ಕೆಲಸ ಮಾಡಿದ್ದಾರೆ. ಕಾರ್ಯಕ್ರಮ ಸ್ಥಗಿತಗೊಂಡ ನಂತರ ಪ್ರೇರಕರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ೨ ಸಾವಿರದಿಂದ ಅಲ್ಪಸ್ವಲ್ಪ ಅನುಕೂಲವಾಗಿತ್ತು. ಆದರೆ ೨೦೧೭ ರಿಂದ ಗೌರವ ಧನ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪ್ರೇರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸರಕಾರಕ್ಕೆ ಮನವಿಸಲ್ಲಿಸಿ ಸರಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪ್ರೇರಕರನ್ನು ಆಯ್ಕೆ ಮಾಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಕ್ಷರತಾ ಪ್ರೇರಕರ ಕ್ಷೇಮಾಭಿವೃದ್ಧಿ ಸಂಘದ ಪ್ರ.ಕಾರ್ಯದರ್ಶಿ ಶ್ರೀನಿವಾಸ್‌ರೆಡ್ಡಿ, ಗೌರವಾಧ್ಯಕ್ಷ ಚೌಡಪ್ಪ, ಉಪಾಧ್ಯಕ್ಷೆ ಪದ್ಮಾವತಿ, ಕಾರ್ಯದಶಿ ವಸಂತಮ್ಮ, ಖಜಾಂಚಿ ರಾಮಚಂದ್ರಪ್ಪ, ಶುಭಾ, ಸಂಘಟನಾ ಸಮಚಾಲಕ ವೆಂಕಟೇಶ್, ಸಂಚಾಲಕ ಎಸ್. ರಾಮಣ್ಣ, ಸಹಲೆಗಾರ ರಾಜಣ್ಣ, ಸದಸ್ಯರಾದ ರಮೇಶ್, ಮನೋಜ್‌ರಾವ್, ಕೆ.ಪಿ.ರಮೇಶ್, ನಾಗಮಣಿ, ಮುರುಳಿ, ಸುನೀಲ್, ರಾಮಕೃಷ್ಣರೆಡ್ಡಿ, ಚಂದ್ರಕಲಾ, ಆರ್.ಶ್ರೀನಿವಾಸ್, ಕೃಷ್ನಪ್ಪ, ವಿದ್ಯಾ, ಪ್ರೇರಕರಾದ ವಿ.ಶ್ರೀನಿವಾಸ್, ಎಂ.ರಮೇಶ್, ಬಿ.ಶ್ರೀನಿವಾಸ್, ಚಂದ್ರಶೇಖರ್, ವೆಂಕಟರಮಣಪ್ಪ, ರಾಧಮ್ಮ, ನಾಗಭೂಷಣ್‌ರಾವ್, ಎಮಣ್ಣ, ಭಾಗ್ಯ, ಶುಭ ಹಾಜರಿದ್ದರು.