ಡಿ.ಕೆ.ಸುರೇಶ್ ಪರ ಬಿ.ಶಿವಣ್ಣ ಮತಯಾಚನೆ

ಆನೇಕಲ್.ಏ.೧೮:ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರವರ ಪರವಾಗಿ ಶಾಸಕ ಬಿ.ಶಿವಣ್ಣರವರು ಬಿದರಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ವೇಳೆ ಅವರು ಮಾತನಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು ವಿಧಾನ ಸಭೆ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿದ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದರು. ಆನೇಕಲ್ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ರವರ ಸಹಭಾಗಿತ್ವದಲ್ಲಿ ಸಾಕಷ್ಠು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇವೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ರವರು ಜನಪರ ವ್ಯಕ್ತಿಯಾಗಿದ್ದು ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ಡಿ.ಕೆ.ಸುರೇಶ್ ರವರಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಅಭಿವೃದ್ದಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಮತಯಾಚನೆಯಲ್ಲಿ ಅತ್ತಿಬೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಹಟ್ಟಿ ರಘುಪತಿರೆಡ್ಡಿ, ಕಾಂಗ್ರೆಸ್ ಮುಖಂಡರಾದ ಬಿದರಗುಪ್ಪೆ ಶಂಕರ್ ರೆಡ್ಡಿ, ಬಿದರಗುಪ್ಪೆ ರಾಜಪ್ಪ, ನರಸಿಂಹ ಮೂರ್ತಿ, ಗುಡ್ಟಹಟ್ಟಿ ಶಂಭಯ್ಯ, ಬಿಎಂಎಸ್ ಮಂಜುನಾಥ್, ಶಿವಕುಮಾರ್, ಮೋಹನ್, ಇಂಡ್ಲಬೆಲೆ ರಾಮಾಂಜಿ ಮತ್ತು ಆನೇಕಲ್ ಲೋಕೇಶ್ ಗೌಡ, ಕಮ್ಮಸಂದ್ರ ಚೇತನ್ ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.