ಡಿ.ಕೆ.ಶಿ ಮೇಲೆ ವಿನಾಕಾರಣ ಆರೋಪ ಖಂಡಿಸಿ ಮತ್ತು ಜಾರಕಿಹೋಳಿ ಬಂಧನಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ವಿಜಯಪುರ, ಮಾ.31-ಕರ್ನಾಟಕ ಪ್ರದೇಶ ಕಾಂಗೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೇಲೆ ವಿನಾಕಾರಣ ಸಿಡಿ ಲೇಡಿ ಕುರಿತು ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆಳಗಾವಿ ಲೋಕಸಭೆ ಉಪಚುನಾವಣೆ ನಾಮಪತ್ರ ಸಲ್ಲಿಸಲು ಬಂದಾಗ ಮಾಜಿ ಸಚಿವ ರಮೇಶ ಜಾರಕಿಹೋಳಿ ರವರ ಬಿ.ಜೆ.ಪಿ ಗುಂಡಾಗಳನ್ನಿಟ್ಟುಕೊಂಡು ಕಲ್ಲು ತುರಾಟ, ಚಪ್ಪಲಿ ಎಸೆತ, ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದನ್ನು ಖಂಡಿಸಿ ಇಂದು ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ರಮೇಶ ಜಾರಕಿಹೋಳಿ ಹಾಗೂ ಗುಂಡಾ ಬಿ.ಜೆ.ಪಿ ಕಾರ್ಯಕರ್ತರನ್ನು ಬಂಧಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು ರಾಜು ಆಲಗೂರ ಮಾಡಬಾರದ ಘನ ಕಾರ್ಯಮಾಡಿ ತಮ್ಮ ತಪ್ಪು ಮುಚ್ಚಿ ಹಾಕುವ ನಿಟ್ಟಿನಲ್ಲಿ ರಮೇಶ ಜಾರಕಿಹೋಳಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮೇಲೆ ವಿನಾಕಾರಣ ಆರೋಪ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಸಂತ್ರಸ್ತೆ ಹೆಣ್ಣು ಮಗಳ ಪರವಾಗಿ ನಿಲ್ಲದೆ ಯಡಿಯೂರಪ್ಪ ಸರಕಾರ ಮಾಜಿ ಸಚಿವನ ಪರ ನಿಂತಿರುವುದು ಹೆಣ್ಣು ಕುಲಕ್ಕೆ ಮಾಡಿದ ಅಪಮಾನವಾಗಿದೆ. ತಕ್ಷಣ ರಾಜ್ಯಪಾಲರೂ ಮಧ್ಯಪ್ರವೇಶಿಸಿ ಸಂತ್ರಸ್ತ ಹೆಣ್ಣು ಮಗಳಿಗೆ ರಕ್ಷಣೆ ಒದಗಿಸಿ ತಪ್ಪಿತಸ್ಥ ರಮೇಶ ಜಾರಕಿಹೋಳಿಗೆ ಬಂಧಿಸಬೇಕೆಂದು ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ಯುವ ಅಧ್ಯಕ್ಷ ಸಿದ್ದು ಛಾಯಾಗೋಳ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಹೆಣ್ಣು ಮಕ್ಕಳ ವಿರೋಧಿಯಾಗಿದ್ದು ಸರಕಾರ ಸಂಪೂರ್ಣ ವಿಫಲವಾಗಿದೆ. ವಿರೋಧ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ ರವರ ಮೇಲೆ ಬಿಜೆಪಿ ಗುಂಡಾ ಕಾರ್ಯಕರ್ತರುಗಳು ಕಲ್ಲು ಎಸೆದು ಮಾರಕಾಸ್ತ್ರ ಪ್ರದರ್ಶಿಸಿದ್ದು ತಕ್ಷಣ ಗೂಂಡಾಗಳಿಗೆ ಬಂಧಿಸಿ ಸರಕಾರ ಜನಪರ ಇದೆಯೋ ಇಲ್ಲವೊ ಅನ್ನುವುದು ಪ್ರದರ್ಶಿಸಬೇಕು. ಒಂದು ವೇಳೆ ಇದೆ ತರಹ ಮುಂದುವರೆದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬ್ರಹತ್ ಪ್ರಮಾಣದಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರದ ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ್, ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ ಮುಂತಾದವರು ಮಾತನಾಡಿದರು.
ಚಡಚಣ ಬ್ಲಾಕ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಮುಖಂಡರುಗಳಾದ ಇರಫಾನ ಶೇಖ, ವಸಂತ ಹೊನಮೊಡೆ, ಇಲಿಯಾಸ ಸಿದ್ದಿಕಿ, ಸಿಂದಗಿ ಯುವ ಬ್ಲಾಕ ಅಧ್ಯಕ್ಷ ಇರಫಾನ ಆಳಂದ, ಸಚೀನ ಮಲಘಾನ, ಪ್ರಕಾಶ ಪಾಟೀಲ, ಬಸವರಾಜ ಪಾಟೀಲ, ಪ್ರವೀನ ಪಾಟೀಲ್, ಆಮಸಿದ್ದ ಬಿಜ್ಜರಗಿ, ಮಂಜುನಾಥ ಬದ್ನಿ, ಮುನೀರ ಬಿಜಾಪುರ, ಅವೀನಾಶ ಬಗಲಿ, ಇಂಡಿ ಬ್ಲಾಕ ಯುವ ಅಧ್ಯಕ್ಷ ರಾಜಶೇಖರ ಅವಜಿ, ನಾಗಠಾನ ಬ್ಲಾಕ ಅಧ್ಯಕ್ಷ ಜನೀರ ಆಲಗೂರ, ಆಲಮೇಲ ಬ್ಲಾಕ ಯುವ ಅಧ್ಯಕ್ಷ ವಿಜಯ ಚವ್ಹಾಣ, ಅರವಿಂದ ರಾಠೋಡ, ಶ್ರೀಹರಿ ಚವ್ಹಾಣ, ಅರುಣ ನಾಯಕ, ಉಮೇಶ ಕಾಖಂಡಕಿ, ಅಪ್ಪು ಚವ್ಹಾಣ, ದಾವಲಸಾಬ ಬಾಗವಾನ, ಅಮಿತ ಚವ್ಹಾಣ, ತಾಜುದಿನ್ ಖಲಿಫಾ, ಹಾಜಿ ಪಿಂಚಾರ, ಜಾವಿದ ಶೇಖ, ರಜಾಕ ಕಾಖಂಡಕಿ, ಆಸಿಫ್ ಪುಂಗಿವಾಲೆ, ಚನ್ನಬಸಪ್ಪ ನಂದರಗಿ ಮುಂತಾದರು ಯುವ ಕಾಂಗ್ರೆಸ್ ಕಾರ್ಯಕತ್ರರು ಉಪಸ್ಥಿತರಿದ್ದರು.