ಡಿ.ಕೆ.ಶಿವುಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ವಿಚಾರ ಅಪ್ರಸ್ತುತ


ಹೊಸಪೇಟೆ:
ಡಿ.ಕೆ.ಶಿವುಕುಮಾರ್, ಮುಖ್ಯಮಂತ್ರಿಯಾಗಲಿ ಎಂಬ ವಿಚಾರವೇ ಅಪ್ರಸ್ತುತ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಸದ್ಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಸಿಎಂ ಸ್ಥಾನ ಖಾಲಿ ಇಲ್ಲ. ಈ ವಿಚಾರವೇ ಸದ್ಯಕ್ಕೀಗ ಅಪ್ರಸ್ತುತವಾಗಿದೆ. ಡಿಸಿಎಂ ಹುದ್ದೆ ಅಸಂವಿಧಾನಕ ಹುದ್ದೆಯಾಗಿದೆ. ಅಂತಿಮವಾಗಿ ಹೆಚ್ಚುವರಿ ಡಿಸಿಎಂ ಹುದ್ದೆ ವಿಚಾರ ಹೈಕಮಾಂಡ್ ನಿರ್ಣಯ ಮಾಡುತ್ತದೆ ಎಂದರು.
ನಾಡಿನ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಜಕೀಯ ಮಾಡುತ್ತಿದ್ದಾರೆ.  ತಮಿಳುನಾಡಿಗೆ ನೀರು ಹರಿಸದ ಮೇಲೆ ನನ್ನೆ ಬಳಿ ಬರ್ತಿರಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ರಾಜ್ಯದ 25 ಸಂಸದರು ಕಾವೇರಿ ಬಗ್ಗೆ ಮಾತನಾಡಲಿ ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಎಸ್ ಎಂಬ ಪದವನ್ನು ತೆಗೆದು ಹಾಕಲಿ. ಮೊದಲಿನಿಂದಲೂ ಜೆಡಿಎಸ್ ಮತ್ತು ಬಿಜೆಪಿಗೆ ಒಳೊಳಗೆ ದೋಸ್ತಿ ಮಾಡಿಕೊಂಡಿದ್ದರು. ಇದೀಗ ಅದು ಬಹಿರಂಗವಾಗಿದೆ. ಅವರ ದೋಸ್ತಿಯಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭಾ ಚುನಾವಣೆ ಕಾಂಗ್ರೆಸ್‍ಗೆ ಅತಿ ಹೆಚ್ಚು ಸ್ಥಾನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.