ದಾವಣಗೆರೆ. ಜೂ.೧೮; ವಿಯೆಟ್ನಮ್* ದೇಶದ ವಿಯೋಗ ವರ್ಲ್ಡ್*, ದಾವಣಗೆರೆಯ *ಅಷ್ಟಾಂಗ ವಿನ್ಯಾಸ ಇಂಟರ್ನ್ಯಾಷನಲ್ ಯೋಗ ಅಕಾಡೆಮಿ ಸಂಸ್ಥೆಯಿಂದ *ವಿಶ್ವ ಯೋಗ ದಿನದ* ಅಂಗವಾಗಿ ಹೋ ಚಿ ಮೀನ್ ನಗರದಲ್ಲಿ ನಡೆದ *”ದಿ ವಿಯೋಗ ವರ್ಲ್ಡ್ ಸ್ಟಾರ್ ಆರ್ಟಿಸ್ಟಿಕ್ ಯೋಗ ಅಂಡ್ ಇಂಟರ್ನ್ಯಾಷನಲ್ ಕಲ್ಚರಲ್ ಎಕ್ಸ್ಚೇಂಜ್”* ಕಾರ್ಯಕ್ರಮದಲ್ಲಿ ನೃತ್ಯ ಕ್ಷೇತ್ರದಲ್ಲಿ *ನಮನ ಅಕಾಡೆಮಿಯ ಗುರು ವಿದುಷಿ ಶ್ರೀಮತಿ ಮಾಧವಿ ಡಿ ಕೆ* ಅವರ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ *”ನಾಟ್ಯ ಮಯೂರಿ”* ಎಂಬ ಅಂತರರಾಷ್ಟ್ರೀಯ ಬಿರುದನ್ನು ನೀಡಿ ಗೌರವಿಸಲಾಯಿತು.