ಡಿ.ಎಸ್.ಎಸ್ (ವಿಮೋಚನಾ ವಾದ) ದಿಂದ ಅಂಬೇಡ್ಕರ್ ಜಯಂತಿ


ಬಳ್ಳಾರಿ, ಏ.15 ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 132ನೇ ಜಯಂತ್ಯೋತ್ಸವನ್ನು ಇಂದು ನಗರದ ಕೆ.ಸಿ.ರಸ್ತೆ, ರಾಘವಕೃಷ್ಣ ಕಾಂಪ್ಲೆಕ್ಸ್‍ನಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಮೋಚನಾವಾದದ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷರಾದ ಟಿ.ರಾಮಾಂಜಿನೇಯಲು ಅವರು, ಎಲ್ಲರೂ ಅಂಬೇಡ್ಕರ್ ಮಾರ್ಗದರ್ಶನದಲ್ಲಿ ಸದಾ ನಡೆಯಬೇಕೆಂದು, ಅವರ ತತ್ವಾದರ್ಶನಗಳನ್ನು ಪಾಲಿಸಲು ಕರೆ ನೀಡಿದರು. ಸಂವಿಧಾನ ರಚನೆಯಾದ ಹಲವಾರು ವರ್ಷಗಳಾದರೂ ನಾವು ಅಂಬೇಡ್ಕರ್‍ರವರನ್ನು ಇಂದಿಗೂ ಸ್ಮರಿಸುತ್ತಿರುವುದು ನಿಜಕ್ಕೂ ಸ್ಮರಣೀಯ, ಇದನ್ನು ಹೀಗೇ ಮುನ್ನಡೆಸಿಕೊಂಡು ಹೋಗಬೇಕೆಂದರು. ಈ ಸಂದರ್ಭದಲ್ಲಿ ಲೋಕರೆಡ್ಡಿ, ನರಸಪ್ಪ, ಆಚಾರಿ, ರಾಮಾಂಜಿನಿ, ಶಶಾಂಕ್, ಗಣೇಶ್, ಸಂಜೀವಪ್ಪ, ಶೀನಪ್ಪ,  ಪ್ರತಿಭಾ, ಸಹನ, ಅಖಿಲ್, ವೀರೇಶ್, ಉಪೇಂದ್ರ, ಪ್ರಸಾದ್, ಹುಲಿಗೆಪ್ಪ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.