ಡಿ.ಎಸ್.ಎಸ್, ಬಿಜಿವಿಎಸ್ ವತಿಯಿಂದ ಬಿ ಗಂಗಾಧರ ಮೂರ್ತಿ ರವರಿಗೆ ಶೃದ್ದಾಂಜಲಿ

ಬೀದರ:ಸೆ.12:ಅಂಬೇಡ್ಕರ್ ವೃತ್ತದಲ್ಲಿ ಪೆÇ್ರ.ಬಿ.ಗಂಗಾಧರ್ ಮೂರ್ತಿರವರ ಶೃದ್ದಾಂಜಲಿ ಸಭೆ ಜರುಗಿತ್ತು .

ದಲಿತ ಚಳವಳಿ, ಜನವಿಜ್ಞಾನ ಚಳವಳಿ, ಸೌಹಾರ್ದ ಚಳವಳಿಗಳಲ್ಲಿ ಜೀವನದುದ್ದಕ್ಕೂ ತೊಡಗಿಸಿಕೊಂಡು ಗಟ್ಟಿಹೋರಾಟ ಕಟ್ಟಿದ ಹಿರಿಯ ಹೋರಾಟಗಾರಗಾದ ಪೆÇ್ರ. ಬಿ. ಗಂಗಾಧರಮೂರ್ತಿ ನಿನ್ನೆಯ ದಿನ ನಮ್ಮನ್ನು ಅಗಲಿದ ಸುದ್ದಿ ಆಘಾತ ತಂದಿದೆ ಅವರು ಬಹುಮುಖ ಪ್ರತಿಭೆಯ ವೈಚಾರಿಕ ಚಿಂತಕರಾಗಿದ್ದರು ಎಂದು ಹಿರಿಯ ಪತ್ರಕರ್ತ ಗಂಧರ್ವ ಸೇನಾ ತಿಳಿಸಿದರು.

ಕೆಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ರವರು ಮಾತನಾಡಿ ಬಿಜಿಎಂ ರವರು ದಲಿತ ಚಳುವಳಿಯ ಒಡನಾಡಿ ಆಗಿದರು ಸದಾ ಸಾಮಾಜೀಕ ನ್ಯಾಯದ ಪ್ರತಿಪಾದಕರಾಗಿದರು ಅವರು ನಮ್ಮನಗಲಿದ್ದು ದಲಿತ ಚಳುವಳಿಗೆ ತುಂಬಲಾರದ ನಷ್ಟ ವಾಗಿದೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಮಾತ್ರ ಬಿಜಿಎಂ ರವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.

ಪ್ರಮುಖರಾದ ಎಂ.ಎಸ್.ಕಟ್ಟಗಿ ಮಾತನಾಡಿ ಬಿ.ಗಂಗಾಧರಮೂರ್ತಿ ರವರು ಅಪರೂಪದ ವ್ಯಕ್ತಿ ಆಗಿದರು ಬಡವರು, ಶೋಶಿತರ ಅನ್ಯಾಯಕೊಳಗಾದವರ ಪರ ಹೋರಾಟ ಮಾಡುವವರಾಗಿದ್ದರು ಎಂದು ತಿಳಿಸಿ ಕಸಾಪ ತಾಲೂಕಾಧ್ಯಕ್ಷ ಬಿ.ಜಿ.ವಿ.ಎಸ್ ರಾಜ್ಯ ಮುಖಂಡ ಎಂ.ಎಸ್.ಮನೋಹರ್ ರವರು ಮಾತನಾಡಿ ಬಿ.ಗಂಗಾಧರ್ ಮೂರ್ತಿ ಸ್ನೇಹಜೀವಿ ಆಗಿದರು ಸದಾ ಚಳುವಳಿ ರೂಪಿಸುತ್ತಿದ್ದರು ಲೇಖಕ ,ಚಿಂತಕ , ಹೋರಾಟಗಾರರಾಗಿ ಕೆಲಸ ನಿರ್ವಹಿಸಿದರು. ಬಿಜಿವಿಎಸ್ ರಾಜ್ಯ ಸಮಿತಿ ಸದಸ್ಯ , ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಮಾತನಾಡಿ ಬಿಜಿಎಂ ರವರು ಸಾವಿನಲ್ಲು ಸಾರ್ಥಕತೆ ಮೆರೆದಿದಾರೆ ಅವರ ಮೃತ್ಯು ದೇಹವನ್ನು ಮೇಡಿಕಲ್ ಕಾಲೇಜಿಗೆ ನೀಡಲಾಗಿದೆ.

ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಪ್ರತಿ ತಿಂಗಳು ಪ್ರಕಟಿಸುವ ಟೀಚರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ವೈಜ್ಞಾನಿಕ ಚಳುವಳಿಯಲ್ಲಿ ತೋಡಗಿದರು. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ಬುದ್ಧ ಬಸವ ಅಂಬೇಡ್ಕರ್ ರವರು ನೀಡಲೆಂದು ಪ್ರಾರ್ಥಿಸಿದ್ದರು ಗೊಂಡ ಸಮಾಜದ ಮುಖಂಡ ಮಾಳಪ್ಪಾ ಅಡಸಾರೆ ಮಾತನಾಡಿ ಬಿ.ಗಂಗಾಧರ್ ಮೂರ್ತಿ ಜೀವನ್ನುದ್ದಕು ಪರೋಪಕಾರಿ ಕಾರ್ಯದಲ್ಲಿ ತೊಡಗಿದ್ದರು ಗೌರಿಬಿದನೂರು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ಸಾವಿರಾರು ವಿಧ್ಯಾರ್ಥಿಗಳಿಗೆ ವಿಧ್ಯಾದಾನ ಮಾಡಿದಾರೆ ಎಂದು ತಿಳಿಸಿದರು.

ಯುವ ಚಿಂತಕ ಜಗದೀಶ ಬಿರಾದರ ಮಾತನಾಡಿ ಬಿಜಿಎಂ ರವರು ಬುದ್ಧ ಬಸವ ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ನಡೆದವರು ಸದಾ ಕ್ರೀಯಾಶಿಲರಾಗಿದ್ದರು ಎಂದು ನುಡಿದರು.ಶೃದ್ದಾಂಜಲಿ ಸಭೆಯಲ್ಲಿ ಪ್ರಮುಖರಾದ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಿ.ಕೃಷ್ಣಪ್ಪ , ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ದೇವಿಪ್ರಸಾದ ಕಲಾಲ್, ಅರುಣ ಪಟೇಲ್, ಅಭಿ ಕಾಳೆ, ರಾಜಕುಮಾರ ವಾಘಮಾರೆ, ಗಾಲಿಬ್ ಹಾಶ್ಮಿ, ಎಂ.ಪಿ.ಮುದಾಳೆ, ಪ್ರಕಾಶ ರಾವಣ, ಮುಖೆಶ ಭಗವಾನ್ ಹೆಡಗಾಪೂರ, ಶಾಹಾಗಂಜ್, ಅರ್ಜುನರಾವ ಕಾಂಚೆ,ರಾಹುಲ್ ಹಾಲೆಪೂರ್ಗಿಕರ್, ಮಿಲಿಂದ್ ನೆಳ್ಗೆ, ಬಕ್ಕಪ್ಪಾ ಗುಪ್ತಾ, ಶಿವ ಸಿಕೆನ್ಪೂರ, ಇನಿತರರು ಉಪಸ್ಥಿತರಿದ್ದರು