ಡಿ.ಎನ್.ಅಕ್ಕಿಗೆ ಬೇಂದ್ರೆ ಪ್ರಶಸ್ತಿ ಪ್ರದಾನ

ಕಲಬುರಗಿ,ಜ.29: ನಾಡಿನ ಖ್ಯಾತ ಸಂಶೋಧಕ-ಸಾಹಿತಿ, ವಿದ್ವಾಂಸರಾದ ಡಿ.ಎನ್.ಅಕ್ಕಿ ಗೋಗಿ ಅವರ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಸಾರಥ್ಯದ ನಮ್ಮ ಕರ್ನಾಟಕ ಸೇನೆಯು ಬೆಂಗಳೂರಿನ ಅರಮನೆ ಗಾಯತ್ರಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಡಿ.ಎನ್.ಅಕ್ಕಿ ಅವರು ದ.ರಾ.ಬೇಂದ್ರೆ ಪ್ರಶಸ್ತಿ ಸ್ವೀಕರಿಸಿದ ಈ ಸಂದರ್ಭದಲ್ಲಿ ಯಡ್ರಾಮಿ ಸಗರಾದ್ರಿ ಸಾಂಸ್ಕøತಿಕ ಸಂಗಮ ಟ್ರಸ್ಟ್ ನ ಅಧ್ಯಕ್ಷರಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು, ಪ್ರಕಾಶ ಸಾಹು ಬೆಲ್ಲದ, ಪತ್ರಕರ್ತ ವಿಜಯೇಂದ್ರ ಕುಲಕರ್ಣಿ,ಪ್ರಶಾಂತ ಅಂಗಡಿ, ಆರ್.ಜಿ.ಪುರಾಣಿಕ, ಬಸವರಾಜ ಅರಕೇರಿ, ಸಿದ್ದು ಹೂಗಾರ, ಪತ್ರಕರ್ತ ಮಲ್ಲಿಕಾರ್ಜುನ, ಲೇಖಕ ಕಿಶೋರ್ ಕುಮಾರ್, ಮತ್ತು ಇತರರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.