ಡಿ.ಆರ್. ಆರ್ ವಿದ್ಯಾಸಂಸ್ಥೆಯಲ್ಲಿ ಕನಕದಾಸರ ಜಯಂತಿ

ದಾವಣಗೆರೆ.ನ.೨೪ : ನಗರದ  ಪಿ ಬಿ ರಸ್ತೆಯ ಡಿ.ಆರ್ ಆರ್ ವಿದ್ಯಾಸಂಸ್ಥೆಯಲ್ಲಿ ಸರಳ ಸಮಾರಂಭದ ಮೂಲಕ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಿಸಲಾಯಿತು.ಡಿ. ಆರ್. ಆರ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಸ್. ಹಾಲೇಶ್ ಹಂಚಿನಮನೆ ನಲ್ಕುದುರೆ  ಕನಕ ದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಬದುಕು – ಬರಹ, ಸಾಹಿತ್ಯ ಶ್ರೇಷ್ಠತೆ ಹಾಗೂ ಭಕ್ತಿ ಭಾವದ ಪರಾಕಾಷ್ಟೆ ಕುರಿತು ಸ್ಮರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಎಂ.ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಡಿ. ಆರ್. ಆರ್ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಭೋಜರಾಜ ಯಾದವ್, ಸುವರ್ಣ ಕಂಠಿ , ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ಸಾವಳಗಿ ಹಾಗೂ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು.