ಡಿ.ಅಮರೇಶ ವಜಾಕ್ಕೆ ದಾವಲ್ ಸಾಬ ಒತ್ತಾಯ

ರಾಯಚೂರು,ನ.೧೧-ಮಾಟಮಾರಿ ವ್ಯಾಪ್ತಿಯಲ್ಲಿ ಬರುವ ಮಾರ್ಚಟಾಳ್ ಗ್ರಾಮದ ರೈಲ್ವೆ ನಿಲ್ದಾಣದ ವಿದ್ಯುತ್ ಸಂಪರ್ಕಕ್ಕೆ ವಿದ್ಯುತ್ ಪರಿವರ್ತಕವನ್ನು ಬದಲಾಯಿಸುವ ಸಂದರ್ಭದಲ್ಲಿ ವಿದ್ಯುತ್ ಅವಘಡದಲ್ಲಿ ನನ್ನ ಮಗ ಮಹ್ಮದ್ ಇಮ್ರಾನ್ ಮೃತಪಟ್ಟು ೨ ವರೆ ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಪ್ರಭಾರಿ ಮುಖ್ಯಾಧಿಕಾರಿ ಡಿ.ಅಮರೇಶ ಇವರನ್ನು ಸೇವೆಯಿಂದ ವಜಾಗೊಳಿಸದೇ ಇದ್ದರೆ ಕಲಬುರ್ಗಿಯ ಮುಖ್ಯ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದು ಮಹ್ಮದ್ ಇಮ್ರಾನ್ ತಂದೆ ದಾವಲ್ ಸಾಬ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ವಿದ್ಯುತ್ ಅವಘಡದಲ್ಲಿ ನನ್ನ ಮಗ ಮಹ್ಮದ್ ಇಮ್ರಾನ್ ಮೃತಪಟ್ಟು ೨ ವರೆ ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಇದನ್ನು ಪ್ರಶ್ನಿಸಿದರೆ ಪ್ರಭಾರಿ ಅಧೀಕ್ಷಕ ಅಭಿಯಂತರರು ಇರುವುದರಿಂದ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೇ ಡಿ.ಅಮರೇಶ ಇವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಖಾನ್ ಸಾಬ್, ಮಹ್ಮದ್ ಇಸ್ಮಾಯಿಲ್, ಅಬ್ದುಲ್ ರಜಾಕ್, ರಿಜ್ವಾನ್ ಇದ್ದರು.