ಡಿ೧೩ ಚಿತ್ರಕಲಾ, ದೈಹಿಕ ಶಿಕ್ಷಣ, ಸಂಗೀತ ನಾಟಕಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ.

ರಾಯಚೂರು.ಡಿ೧೦:ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಡಿ೧೩ ರಂದು ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಚಿತ್ರಕಲಾ, ದೈಹಿಕ ಶಿಕ್ಷಣ, ನಾಟಕ ಹಾಗೂ ಸಂಗೀತ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ರಾಯಚೂರಿನಲ್ಲಿ ಶ್ರೀ ಗುರುಕಲಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಳ್ಳಲಾದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರ ಸಲಹೆ ಸೂಚನೆಯ ಮೇರೆಗೆ ಇದೇ ತಿಂಗಳು ೧೩ ರಂದು ರಾಯಚೂರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಚಿತ್ರ ಬಿಡಿಸಿ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಎಐಡಿವೈಒ ತಿಳಿಸಿದೆ.
ಸಭೆಯ ಅಧ್ಯಕ್ಷತೆಯನ್ನು ಶ್ರೀಗುರುಕಲಾ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ್ ಅವರು ವಹಿಸಿ, ಮಾತನಾಡಿ ಕಳೆದ ೧೫ ವರ್ಷಗಳಿಂದ ಚಿತ್ರಕಲಾ, ನಾಟಕ ಸೇರಿದಂತೆ ಇನ್ನಿತರ ವಿಶೇಷ ಶಿಕ್ಷಕರ ನೇಮಕಾತಿ ನಡೆದಿಲ್ಲ. ಈ ಕುರಿತು ಸರ್ಕಾರದ ಮೇಲೆ ಒತ್ತಡ ತರಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ಅವರು ಕರೆ ನೀಡಿದರು.
ಎಐಡಿವೈಒ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ ರಾಯಚೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ನಂತರ ರಾಜ್ಯಮಟ್ಟದ ಹೋರಾಟಕ್ಕೂ ಪ್ರತಿಯೊಬ್ಬರು ಸಿದ್ದರಾಗಬೇಕೆಂದು ಮನವಿ ಮಾಡಿದರು. ಈ ಸಭೆಯಲ್ಲಿ. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದ್ ಕುಮಾರ್ ಜಿಲ್ಲಾ ಸಮಿತಿ ಸದಸ್ಯರಾದ ಮೌನೇಶ್ ಮೀರಾಪುರ್, ಮೌನೇಶ್ ಬೊಮ್ಮನಹಳ್ಳಿ ಚಿತ್ರ ಕಲಾವಿದರಾದ ಮಲ್ಲಿಕಾರ್ಜುನ ಆಲೂರ್, ಗೋವಿಂದ ಸಿ ಎಚ್, ಎಲ್ಲಪ್ಪ ಕೆ, ಮಲ್ಲಪ್ಪ, ನರಸಪ್ಪ, ತಿಮ್ಮಪ್ಪ, ಮಹೇಶ್, ಪದ್ಮ, ಶಾಮಲಾ, ನರಸಮ್ಮ, ಶಶಿಕಲಾ, ಅರವಿಂದ್, ಆನಂದ್ ಮುಂತಾದ ಚಿತ್ರಕಲಾವಿದರು ಇದ್ದರು.