
ಸ್ಯಾನ್ ಫ್ರಾನ್ಸಿಸ್ಕೊ,ಮೇ.೨೩- ಮನರಂಜನೆಯ ದೈತ್ಯ ಕಂಪನಿಯಾದ ಡಿಸ್ನಿ ಹಾಟ್‌ಸ್ಟಾರ್ ತನ್ನ ಮೂರನೇ ಸುತ್ತಿನಲ್ಲಿ ಉದ್ಯೋಗಿಗಳ ವಜಾಗೊಳಿಸುವಿಕೆಯನ್ನು ಆರಂಭಿಸಿದೆ. ಇದರಿಂದಾಗಿ ೨,೫೦೦ಕ್ಕೂ ಹೆಚ್ಚು ಉದ್ಯೋಗಿಗಳ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ವೆಚ್ಚ ಕಡಿತದ ಕ್ರಮದ ಭಾಗವಾಗಿ, ಕಂಪನಿಯು ಈ ವಾರ ತನ್ನ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‌ಗಳ ಹಲವು ವಿಭಾಗದ ಕೆಲಸಗಾರರನ್ನು ತೆಗೆದುಹಾಕಲು ಪ್ರಾರಂಭಿಸಿದೆ.
ಕಂಪನಿ ತನ್ನ ಉದ್ಯೋಗಿಗಳನ್ನು ಸುಮಾರು ೭,೦೦೦ ಕಾರ್ಮಿಕರಿಂದ ಕಡಿಮೆ ಮಾಡುವ ಗುರಿಯನ್ನು ಹೊಂದಿರುವುದರಿಂದ ಡಿಸ್ನಿ ಸಿಇಒ ಬಾಬ್ ಐಗರ್ ಮೂರು ಸುತ್ತಿನ ವಜಾಗಳನ್ನು ಘೋಷಿಸಿದಾಗ ಮಾರ್ಚ್‌ನಲ್ಲಿ ಮೊದಲ ಸುತ್ತಿನ ವಜಾಗೊಳಿಸುವಿಕೆ ಪ್ರಾರಂಭವಾಯಿತು. ಏಪ್ರಿಲ್‌ನಲ್ಲಿ ಡಿಸ್ನಿ ತನ್ನ ಎರಡನೇ ಸುತ್ತಿನ ವಜಾವನ್ನು ಪ್ರಾರಂಭಿಸಿತು, ಇದರಿಂದ ೪,೦೦೦ ಉದ್ಯೋಗಿಗಳ ಕೆಲಸ ಕಳೆದುಕೊಂಡಿದ್ದರು.