ಡಿಸೆಂಬರ್ ನಲ್ಲಿ 6 ಜಿಲ್ಲೆಗಳ ಅಗ್ನಿವೀರರ ಭರ್ತಿ ಕಾರ್ಯ

ಬೀದರ್: ಜು.30:ಅಗ್ನಿವೀರ’ ರಾಗಬಯಸುವ ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಯುವಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಡಿಸೆಂಬರ್ 5 ರಿಂದ 22 ರವರೆಗೆ ಅಗ್ನಿಪಥ ಸೇನಾ ಭರ್ತಿ ರ್ಯಾಲಿಯನ್ನು ಬೀದರ್ ನ ನೆಹರು ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ.

10ನೇ ತರಗತಿ ಪಾಸಾದವರಿಗೆ ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಟ್ರೇಡ್ಸ್ ಮನ್, 8ನೇ ತರಗತಿ ಪಾಸಾದವರಿಗೆ ಅಗ್ನಿವೀರ ಟ್ರೇಡ್ಸ್ ಮನ್ ಹಾಗೂ ಅಗ್ನಿವೀರ ಕ್ಲರ್ಕ್ / ಸ್ಟೋರ್ ಕೀಪರ್ ತಾಂತ್ರಿಕ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ.

ವಯಸ್ಸು, ಶೈಕ್ಷಣಿಕ ಅರ್ಹತೆ ಸೇರಿದಂತೆ ಇತರೆ ಮಾನದಂಡಗಳ ಕುರಿತು ಜುಲೈ 30ರಂದು ಬೆಳಗಾವಿಯ ಅರ್ಮಿ ರಿಕ್ರೂಟ್ಮೆಂಟ್ ಆಫೀಸ್ನಲ್ಲಿ ಅಧಿಸೂಚನೆ ಪ್ರಕಟಿಸಲಾಗುತ್ತಿದ್ದು, ಆಗಸ್ಟ್ 5 ರಿಂದ ಸೆಪ್ಟೆಂಬರ್ 3ರವರೆಗೆ ಆನ್ ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ.

http://joinindianarmy.nic.in ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ನೋಂದಾಯಿತ ಅಭ್ಯರ್ಥಿಗಳ ಇ ಮೇಲ್ ಗೆ ನವೆಂಬರ್ 10 ರಿಂದ 20ರ ಅವಧಿಯಲ್ಲಿ ಸಂದೇಶ ಕಳುಹಿಸಲಾಗುತ್ತದೆ.