ಡಿಸೆಂಬರ್ ತಿಂಗಳಲ್ಲಿ ತಾಲೂಕಾ ಸಾಹಿತ್ಯ ಸಮ್ಮೇಳನ

ಮುದ್ದೇಬಿಹಾಳ : ಸೆ.12:ಮುಂಬರುವ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಜಿಲ್ಲೆಯ ಕಸಾಪದ ಚುಕ್ಕಾಣಿ ಹಿಡಿದ ಬಳಿಕ ಸಾಕಷ್ಟು ಸಾಹಿತ್ಯೀಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.ಜಿಲ್ಲೆಯ ಅನೇಕ ಹಿರಿಯರು ಮಕ್ಕಳ ಸಾಹಿತ್ಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.ಪ್ರತಿಭಾವಂತ ಮಕ್ಕಳಿಗೆ ರಾಜ್ಯ ಮಕ್ಕಳ ಸಮ್ಮೇಳನವನ್ನು ಮಾಡುತ್ತಿದ್ದೇವೆ.ಕಸಾಪ ಕಾರ್ಯಕಾರಿ ಘಟಕದ ಪದಾಧಿಕಾರಿಗಳು ರಾಜ್ಯಮಟ್ಟದ ಸಮ್ಮೇಳನ ನಡೆಸುವ ನಿರ್ಧಾರ ಮಾಡುತ್ತಾರೆ.ಜಿಲ್ಲಾ ಹಾಗೂ ತಾಲೂಕಿನ ಕಸಾಪ ಪದಾಧಿಕಾರಿಗಳು ಬೆಂಬಲ ನೀಡುತ್ತಿರುವುದರಿಂದ ಈ ಕಾರ್ಯಕ್ರಮ ನಡೆಸಲು ಉತ್ಸಾಹ ಬಂದಿದೆ ಎಂದು ಹೇಳಿದರು.

ಬರಹಗಾರರು,ಕವಿಗಳು,ಸಾಹಿತಿಗಳನ್ನು ಸನ್ಮಾನಿಸಲು ತೀರ್ಮಾನ ಮಾಡಿದ್ದೇವೆ.ಜಿಲ್ಲಾ ಕನ್ನಡ ಸಾಹಿತ್ಯ ಭವನ 5-6 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ನೀಲನಕ್ಷೆ ಸಿದ್ಧವಾಗುತ್ತಿದೆ.ಸದ್ಯದ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ಸಣ್ಣಪುಟ್ಟ ದುರಸ್ತಿ ಮಾಡಿ ಸಾಂಸ್ಕøತಿಕ,ಸಾಹಿತ್ಯದ ಚಟುವಟಿಕೆಗಳಿಗೆ,ರೈತಪರ,ವಿವಿಧ ಕನ್ನಡಪರ ಸಂಘಟನೆಗಳಿಗೆ ಉಚಿತವಾಗಿ ಬಳಸಿಕೊಳ್ಳಲು ನೀಡಲಾಗುತ್ತದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಷಿ ಅವರು, ಅಂಗವಿಕಲರಿಗೆ,ಮಾಜಿ ಸೈನಿಕರಿಗೆ ಉಚಿತವಾಗಿ ಕಸಾಪ ಸದಸ್ಯತ್ವ ಮಾಡುವುದಾಗಿ ತಿಳಿಸಿದ್ದು ಅದರಂತೆ ಮಾಧ್ಯಮ ಕ್ಷೇತ್ರವನ್ನೂ ಈ ವ್ಯಾಪ್ತಿಯಲ್ಲಿ ಪರಿಗಣಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಎಂ.ಎಚ್.ಹಾಲಣ್ಣವರ ಮಾತನಾಡಿ, ಮುದ್ದೇಬಿಹಾಳ ತಾಲೂಕಿನಲ್ಲಿ 25 ದತ್ತಿದಾನಿಗಳಿದ್ದು ಅದರಲ್ಲಿ ನಾಲ್ಕು ದತ್ತಿ ಕಾರ್ಯಕ್ರಮ ಮಾಡಲಾಗಿದೆ.ಮುದ್ದೇಬಿಹಾಳ ತಾಲೂಕಿಗೆ ಪತ್ರಿಕಾಭವನದ ಅವಶ್ಯಕತೆ ಇದ್ದು ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.ಕನ್ನಡ ಭವನ ನಿರ್ಮಾಣಕ್ಕೂ ನಿವೇಶನ ಹುಡುಕಾಟದಲ್ಲಿದ್ದು ಶಾಸಕರು ಅನುದಾನದ ಭರವಸೆ ನೀಡಿದ್ದಾರೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಮಹಾದೇವ ರೆಬಿನಾಳ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ವಾತಾವರಣ ಮೂಡಿಸಲು ಕವಿಗಳ ಬಗೆಗೆ,ಸಾಹಿತ್ಯದ ಪರಿಚಯ ಮಾಡಿಕೊಡಲು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.ರಾಜ್ಯಾಧ್ಯಕ್ಷ ಮಹೇಶ ಜೋಷಿ ಅವರು ಒಂದು ಕೋಟಿ ಸದಸ್ಯರನ್ನು ಮಾಡಲು ತೀರ್ಮಾನಿಸಿದ್ದಾರೆ.ಕಸಾಪ ಸಾಹಿತ್ಯದ ಪರಿಷತ್‍ನ ಸದಸ್ಯತ್ವಕ್ಕೆ ಆಪ್ ಬಿಡುಗಡೆ ಮಾಡಿದ್ದು ಅದರ ಮೂಲಕ ಸದಸ್ಯರಾಗಬಹುದು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ,ಪದಾಧಿಕಾರಿಗಳಾದ ಬುರಾನ್ ರುದ್ರವಾಡಿ, ಎಸ್.ಕೆ.ಹರನಾಳ, ಡಾ.ಪ್ರಕಾಶ ನರಗುಂದ,ವಿ.ಎಸ್.ಲಮಾಣಿ,ಕೆಂಚಪ್ಪ ಬಿರಾದಾರ,ಪ್ರಶಾಂತ ಕಾಳೆ ಮೊದಲಾದವರು ಇದ್ದರು.


ವಿಜಯಪುರ ಜಿಲ್ಲೆಯ ಮಾಧ್ಯಮ ಕ್ಷೇತ್ರದ ಎಲ್ಲ ಪತ್ರಿಕೆಗಳ ಮತ್ತು ಅವರ ಕುಟುಂಬದವರ ಸದಸ್ಯತ್ವವನ್ನು ಜಿಲ್ಲಾ ಸಾಹಿತ್ಯ ಪರಿಷತ್ ಉಚಿತವಾಗಿ ನೋಂದಣಿ ಮಾಡಿಕೊಡಲಿದೆ.ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರ ಸದಸ್ಯತ್ವ ಮಾಡಿಕೊಡಲಾಗುತ್ತದೆ.

–ಹಾಸಿಂಪೀರ ವಾಲೀಕಾರ,ಕಸಾಪ ಜಿಲ್ಲಾಧ್ಯಕ್ಷ