
ಕಲಬುರಗಿ.ಮಾ.07:ಬಡಜನರಿಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲು 2023ರ ಡಿಸೆಂಬರ್‍ವರೆಗೆ ಭಾರತದಾದ್ಯಂತ ಇನ್ನೂ ಹತ್ತು ಸಾವಿರ ಜನೌಷಧಿ ಮಳಿಗೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸರ್ಕಾರದ ರಾಜ್ಯ ಸಚಿವ ಭಗವಂತ ಖೂಬಾ ಅವರು ಹೇಳಿದರು.
ಮಂಗಳವಾರದಂದು ನಗರದ ಜಗತ್ ಸರ್ಕಲ್ ಹತ್ತಿರದ ಕನ್ನಡ ಸಾಹಿತ್ಯ ಸಂಘದ ಕಟ್ಟಡದಲ್ಲಿ ಜನೌಷಧಿ ದಿವಸ್ ಕಾರ್ಯಕ್ರಮವನ್ನು ಉದ್ಫಾಟಿಸಿ ಅವರು ಮಾತನಾಡಿದರು. 2008 ರಲ್ಲಿ ಕೇವಲ 80 ಜನೌಷಧಿ ಕೇಂದ್ರದಿಂದ ಆರಂಭವಾದ ಈ ಯೋಜನೆಯು 2023ರ ಫೆಬ್ರವರಿ 28 ರವರೆಗೆ ಭಾರತದಾದ್ಯಂತ 9,177 ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದೆ ಎಂದರು.
ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿ.ಎಮ್.ಬಿ.ಜೆ.ಪಿ) ಅನ್ನು ರಾಸಾಯನಿಕ ಸಚಿವಾಲಯದ ಫಾಮಾಸ್ಯುಟಿಕಲ್ಸ್ ಇಲಾಖೆಯು ಪ್ರಾರಂಭಿಸಿದೆ ಎಂದು ಹೇಳಿದರು.
ಯಾವುದೇ ಬಡ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ ಜನೌಷಧಿ ಅಂಗಡಿಗಳ ಹೋಗಿ ಜೌಷಧಿಗಳನ್ನು ಖರೀದಿ ಮಾಡಬೇಕೆಂದರು. ಬಡಜನರಿಗೆ ಅನುಕೂಲಕ್ಕಾಗಿ ಜನೌಷಧಿಗಳ ಮಳಿಗೆಗಳನ್ನು ತೆರೆಯಲಾಗಿದೆ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಭಾರತ ಸರ್ಕಾರ ಫಾರ್ಮಾಸ್ಯುಟಿಕಲ್ಸ್ ಮತ್ತು ಡಿವೈಸ್ ಬ್ಯೂರೋ ಆಫ್ ಇಂಡಿಯಾ ಉಪ ಪ್ರಧಾನ ವ್ಯವಸ್ಥಾಪಕ ಜಯಪ್ರಕಾಶ ಮಿಶ್ರಾ ಅವರು ಮಾತನಾಡಿ, ಪ್ರತಿಯೊಂದು ವಸ್ತುಗಳ ಸಂಪೂರ್ಣ ಚೆಕ್ ಮಾಡಿ ಜನರು ಯಾವುದೇ ಸಂಪೂರ್ಣವಾಗಿ ನಂಬಿಕೆಯಿಂದ ಬಳಸಬಹುದು. ಯಾವುದೇ ಲೋಪದೋಷಗಳನ್ನು ಕಂಡು ಬಂದಲ್ಲಿ ಮಳಿಗೆಗಳ ಮುಖ್ಯಸ್ಥರಿಗೆ ತಿಳಿಸಿದರೆ ಅವರು ನಮ್ಮ ಗಮನಕ್ಕೆ ತರುತ್ತಾರೆ ಅದನ್ನು ಸಂಪೂರ್ಣ ಪರಿಶೀಲಿಸಿ ಕ್ರಮತೆಗೆದುಕೊಳ್ಳಲಾಗುವುದು ಎಂದರು. ಇದೇ ಸಂದರ್ಭಲ್ಲಿ ಫಲಾನುಭವಿಗಳ ಜೊತೆಗೆ ಅಂಗಡಿ ಮಾಲೀಕರು ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿ ವೃತ್ತ-1ರ ಜೌಷಧಿಯ ನಿಯಂತ್ರಿಕ ಕರುಣಾದೇವಿ, ಕಲಬುರಗಿ ವೃತ್ತ-2ರ ಜೌಷಧಿಯ ನಿಯಂತ್ರಿಕ ಗೋಪಾಲರಾವ ಭಂಡಾರಿ, ಫಲಾನುಭವಿಗಳಾದ ಜಿ.ಪಾಂಡುರಂಗರಾವ, ಇಮ್ತಿಯಾಜ್ ಅಹ್ಮದ್, ಸೇರಿದಂತೆ ಎಲ್ಲಾ ಜನ ಔಷಧಿ ಅಂಗಡಿ ಮಾಲೀಕರು. ವಿವಿಧ ಸಂಘ ಸಂಸ್ಥೆಗಳು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಭಾರತ ಸರ್ಕಾರದ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ನಿರ್ದೇಶಕ ಅಭಿಷೇಕ್ ಕೆ.ಆರ್.ಸಿಂಗ್, ಸ್ವಾಗತಿಸಿದರು.