ಡಿಸಿ ವರ್ಗಾವಣೆಗೆ ಪಾಲಿಕೆ ಸದಸ್ಯರ ಪ್ರತಿಭಟನೆ

ಮೈಸೂರು, ಜೂ.4: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರಿಗೆ ಪಾಲಿಕೆ ಕಾಪೆರ್Çೀರೇಟರ್‍ಗಳು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಐ ಸ್ಟ್ಯಾಂಡ್ ವಿತ್ ಅವರ್ ಕಮಿಷನರ್ ಎಂಬ ಬ್ಯಾನರ್ ನಡಿ ಮೈಸೂರು ಪಾಲಿಕೆ ಕಾಪೆರ್Çೀರೇಟರ್‍ಗಳು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ಶಿಲ್ಪನಾಗ್ ಅವರನ್ನ ಬೆಂಬಲಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
`ತೊಲಗಲಿ ತೊಲಗಲಿ ಡಿಸಿ ತೊಲಗಲಿ’. ಉಳಿಸಿ ಉಳಿಸಿ ಮೈಸೂರು ಉಳಿಸಿ, ಐಎಎಸ್ ಅಧಿಕಾರಿ ಕನ್ನಡತಿ ಶಿಲ್ಪಾನಾಗ್ ಉಳಿಯಬೇಕು ಎಂದು ಘೋಷಣೆ ಕೂಗುವ ಮೂಲಕ ಪಾಲಿಕೆ ಸದಸ್ಯರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾನಡೆಸಿ ಆಕ್ರೋಶ ಹೊರ ಹಾಕಿದರು.