ಡಿಸಿ ರೋಹಿಣಿ ಸಿಂಧೂರಿ ಪರ ನಾನಿದ್ದೇನೆ: ವಾಟಾಳ್ ನಾಗರಾಜ್

ಮೈಸೂರು: ಜೂ.05: ದಕ್ಷ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಪರ ನಾನಿದ್ದೇನೆ, ಡಿಸಿ ವರ್ಗಾವಣೆಗೆ ವ್ಯವಸ್ಥಿತ ಪಿತೂರಿ ಮಾಡಲಾಗಿದ್ದೆ ಎಂದು ಆರೋಪಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನೆಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದಕ್ಷ ಡಿಸಿ ವರ್ಗಾವಣೆಗೆ ವ್ಯವಸ್ಥಿತ ಪಿತೂರಿ ಮಾಡಲಾಗಿದ್ದು, ಇದನ್ನು ಖಂಡಿಸುತ್ತೇನೆ. ಸಿಎಂ ಇವರನ್ನು ಉಳಿಸಬೇಕಿದೆ. ಇಲ್ಲಿರುವ ಅನೇಕ ಅಕ್ರಮ ಆಚೆ ಬರುವ ಭಯದಿಂದ ಜಿಲ್ಲಾಧಿಕಾರಿ ವರ್ಗಾವಣೆಗೆ ಪಿತೂರಿ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರಲ್ಲದೇ, ಭೂ ಹಗರಣದ ವಿರುದ್ಧ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಷೇಧಿಸುವಂತೆ ಆಗ್ರಹಿಸಿ ನಾಳೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರ ಮನೆ ಎದುರು ಪ್ರತಿಭಟಿಸಲಾಗುವುದು. ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು.
ಪ್ರತಿಭಟನೆಯಲ್ಲಿ ತಾಯೂರು ವಿಠಲಮೂರ್ತಿ, ಮುಗೂರು ನಂಜುಂಡಸ್ವಾಮಿ ಇದ್ದರು.