
ರಾಯಚೂರು,ಜು.೮- ನಗರದ ಸರ್ವೇ ನಂ.೧೪೮೭ರ ೨ಎಕರೆ ೧೬ ಗುಂಟೆ ಪೈಕಿ ೧೭ ಗುಂಟೆ ಸರಕಾರಿ ಭೂಮಿಯನ್ನು ಡಾ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಗೆ ೩೦ ವರ್ಷ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಬೇಕೆಂದು ಕೋರಿ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ಕ್ರಮಕ್ಕಾಗಿ ತಹಶೀಲ್ದಾರರಿಗೆ ಪತ್ರ ಬರೆದರು ತಹಶೀಲ್ದಾರರು ಮೌನ ವಹಿಸಿದ್ದಾರೆ ಎಂದು ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಬೇಸರ ವ್ಯಕ್ತಪಡಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿ, ದೇವಮಿತ್ರ ವಕೀಲರು ಮತ್ತು ಮಾರುತಿರಾವ್ ಜಂಬಾಂಗ ಸೇರಿಕೊಂಡು ಕರ್ನಾಟಕ ರಾಜ್ಯದ ನಾಗರಿಕರಿಗೆ ರಾಜಕೀಯ ಶಿಕ್ಷಣ ನೀಡಬೇಕೆಂದು ಡಾ. ಅಂಬೇಡ್ಕರ್ ರಾಜಕೀಯ ಶಿಕ್ಷಣ ಸಂಸ್ಥೆಯನ್ನು ೨೦೧೫ರ ಫೆ.೨೫ ರಂದು ಪ್ರಾರಂಭಮಾಡಿದರು. ನಾನು ೨೦೨೦ ಸೆಪ್ಟಂಬರ್ ೧೮ ರಂದು ಡಾ.ಅಂಬೇಡ್ಕರ್ ರಾಜಕೀಯ ಶಿಕ್ಷಣ ಸಂಸ್ಥೆಗೆ ರಾಜ್ಯ ಕಾರ್ಯಕಾರಿ ಸದಸ್ಯರಾಗಿ ಜಿಲ್ಲಾಧಿಕಾರಿಗಳಿಗೆ ನಗರದ ಸರ್ವೇ ನಂ. ೧೪೮೭ರ ೨ ಎಕರೆ ೧೬ ಗುಂಟೆಗಳ ಪೈಕಿ ೧೭ ಗುಂಟೆ ಸರಕಾರಿ ಭೂಮಿಯನ್ನು ಡಾ. ಅಂಬೇಡ್ಕರ್ ರಾಜಕೀಯ ಶಿಕ್ಷಣ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ೩೦ ವರ್ಷ ಅವಧಿಗೆ ಮಂಜೂರು ಮಾಡಬೇಕೆಂದು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳು ರಾಯಚೂರು ತಾಲೂಕಿನ ತಹಶೀಲ್ದಾರರಿಗೆ ನನ್ನ ಮನವಿಯಲ್ಲಿನ ಬೇಡಿಕೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲು ಸೂಚಿಸಿದರು. ಇದರ ಪ್ರತಿಯನ್ನು ಸಹಾಯಕ ಆಯುಕ್ತರಿಗೆ ಸೂಕ್ತ ಕ್ರಮಕ್ಕಾಗಿ ಸಲ್ಲಿಸಿದರು. ಆದರೆ ರಾಯಚೂರು ತಾಲೂಕಿನ ತಹಶೀಲ್ದಾರರು ಇಲ್ಲಿಯವರೆಗೆ ನನ್ನ ಮನವಿಗೆ ಹಾಗೂ ಜಿಲ್ಲಾಧಿಕಾರಿಗಳ ಪತ್ರಕ್ಕೆ ಉತ್ತರ ನೀಡದೆ ಮೌನವಾಗಿದ್ದಾರೆ.ರಾಯಚೂರು ತಾಲೂಕಿನ ತಶೀಲ್ದಾರರು ರಾಯಚೂರು ನಗರದ ಸರ್ವೇ ನಂ. ೧೪೮೭ ವಿಸ್ತೀರ್ಣ ೨ ಎಕರೆ ೧೬ ಗುಂಟೆ ಸರ್ಕಾರಿ ಭೂಮಿಯನ್ನು ಸರ್ವೇ ಮಾಡಿ ಸಹಾಯಕ ಆಯುಕ್ತರುಇವರಿಗೆ ವರದಿ ಸಲ್ಲಿಸಿದರು. ಸರ್ವೇ ನಂ. ೧೪೮೭ ವಿಸ್ತೀರ್ಣ ೨ ಎಕರೆ ೧೬ ಗುಂಟೆ ಪೈಕಿ ೦೧ ಎಕರೆ ೩೯ ಗುಂಟೆಯಲ್ಲಿ ಸಾರ್ವಜನಿಕರು ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮತ್ತು ೧೭ ಗುಂಟೆ ಸರಕಾರಿ ಭೂಮಿಯನ್ನು ರಾಮನಗೌಡ ಅಬಕಾರಿ ಗುತ್ತಿಗೆದಾರರು ರಾಯಚೂರು ನಗರಸಭೆ ಬೋಗಸ್ ದಾಖಲಾತಿಯೊಂದಿಗೆ ಅನಧಿಕೃತವಾಗಿ ಖಬ್ಜಾ ಮಾಡಿದ್ದಾರೆ. ಮುಂಬರುವ ನಾಲ್ಕು ವಾರದ ನಂತರ ಕರ್ನಾಟಕ ಭೂ ನಿಷೇಧ ವಿಶೇಷ ನ್ಯಾಯಾಲಯ, ಬೆಂಗಳೂರಿನಲ್ಲಿ ದಾವೆ ಹೂಡಿ ರಾಯಚೂರು ನಗರಸಭೆ ಬೋಗಸ್ ದಾಖಲಾತಿಗಳನ್ನು ರದ್ದುಪಡಿಸಿ ಅನಧಿಕೃತವಾಗಿ ಖಬ್ಜಾ ಮಾಡಿದ್ದನ್ನು ತೆರವುಗೊಳಿಸಲು ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ದಿನಾಂಕ ೦೫.೧೦.೨೦೦೬ ರಂದು ಪಂಜಾಬ್ ರಾಜ್ಯ ಸರ್ಕಾರವು ಜಾರಿ ಮಾಡಿದ ಪಂಜಾಬ್ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆ ೨೦೦೬ ಮತ್ತು ನ್ಯಾಯಮೂರ್ತಿ ಅರುಣ ಮಿಶ್ರಾ ಒಳಗೊಂಡ ಪಂಚ ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಆದೇಶವನ್ನು ರದ್ದು ಮಾಡಲು ಮಧ್ಯಸ್ಥಿಕೆ ಅಪ್ಲಿಕೇಶನ್‌ನನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಒಳಮೀಸಲಾತಿ ಪರವಾಗಿ ಹೋರಾಟ ಮಾಡುತ್ತಿರುವ ಸಂಘಟನೆಗಳು ಸುಪ್ರೀಂ ಕೋರ್ಟ್ನಲ್ಲಿ ಮಧ್ಯಸ್ಥಿಕೆ ಅಪ್ಲಿಕೇಶನ್ ಸಲ್ಲಿಸಬಹುದು ಎಂದು ಹೇಳಿದರು.