ಡಿಸಿ ಕಚೇರಿ ಮುಂದೆ ಪ್ರಗತಿಪರ  ಸಂಘಟನೆಗಳಿಂದ  ಸ್ವಾತಂತ್ರ ಮಹೋತ್ಸವ

(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.16:  ಪ್ರಾಂತ ರೈತ ಸಂಘ, ಭೂಸಂತ್ರಸ್ತ ಹೋರಾಟ ಸಮಿತಿ , ಜನವಾದಿ ಮಹಿಳಾ ಸಂಘ, ಡಿ ವೈ ಎಫ್ ಐ ಅಲ್ಲದೆ ಭೂ ಸಂತಸ್ತ್ರ ಹೋರಾಟ ಸಮಿತಿ  ಮೊದಲಾದ  ಪ್ರಗತಿಪರ ಸಂಘಟನೆಗಳ ನೆತೃತ್ವದಲ್ಲಿ 77ನೇ ಸ್ವಾತಂತ್ರ್ಯೊತ್ಸವದ ಸಂಭ್ರಮಾಚರಣೆಯನ್ನು ನಗರದ ಡಿಸಿ‌ಕಚೇರಿ‌ಬಮುಂದೆ ಆಗಸ್ಟ್ 14ರ ಸಂಜೆ 6ಗಂಟೆಯಿಂದ  15ರ ಬೆಳಗಿನ ಜಾವ 6 ಗಂಟೆ ವರೆಗೆ ಆಚರಿಸಲಾಯ್ತು.ಪ್ರಾಂತ ರೈತ ಸಂಘದ ರಾಜ್ಯಮುಖಂಡ ಯು. ಬಸವರಾಜ ಕಾರ್ಯಕ್ರಮ ಉದ್ಘಾಟಿಸಿ, ‘ ಸ್ವಾತಂತ್ಯ ಹೋರಾಟದಲ್ಲಿ ಎಲ್ಲಾ ಹಂಗುತೊರೆದು ರೈತರು ಕಾರ್ಮಿಕರು ಯುವಕರು,ಮಹಿಳೆ ಯರು,ದಲಿತರು ಪಾಲ್ಗೊಂಡಿದ್ದರು. ಅವರ ಅಪಾರ ಪ್ರಾಣ ಬಲಿದಾನದ ಮೂಲಕ ಸ್ವಾತಂತ್ರ ಲಭಿಸಿದೆ. ಹೀಗೆ ಗಳಿಸಿದ ಸ್ವಾತಂತ್ರ್ಯ ಇದೇ ಜನ ವಿಭಾಗಕ್ಕೆ ಸಂಪೂರ್ಣ ವಾಗಿ ದಕ್ಕಲಿಲ್ಲ.  ಯಾವ ಕನಸುಗಳಿಗಾಗಿ ಹೋರಾಟ ಮಾಡಿದರೊ ಆ ಕನಸುಗಳು ನನಸಾಗಿಲ್ಲ. ಕೇವಲ ಅಧಿಕಾರಸ್ತರ ಬದಲಾವಣೆ ಆಗಿದೆ. ಆದರೆ ಜನರಿಗೆ ಆರ್ಥಿಕ ,ಸಾಮಾಜಿಕ ಸ್ವಾತಂತ್ರ್ಯ ಇದುವರೆಗೂ ದೊರೆತಿಲ್ಲ . ಹೀಗಾಗಿ ಇಂದಿಗೂ ಸ್ವಾತಂತ್ರ್ಯ ಪೂರ್ವ ಸಮಸ್ಯೆಗಳು ಹಾಗೇ ಮುಂದುವರೆದಿವೆ ಎಂದು ವಿಷಾದದ ವ್ಯಕ್ತ ಪಡಿಸಿದರು.ರಾಜ್ಯ ಬುಡಕಟ್ಟು ಜನರ ವಿಮೋಚನಾ ಸಂಘದ ಅಧ್ಯಕ್ಷ ಡಾ. ಎಸ್.ವೈ. ಗುರುಶಾಂತ್,  ಸಿಐಟಿಯು ಮುಖಂಡ ಜೆ.ಸತ್ಯಬಾಬು ಅವರು  ಮಾತನಾಡಿ,ಕುಡಿ ತಿನಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭೂಸಂತ್ರಸ್ತ ಹೋರಾಟ ಮುಂದುವರೆಸಲಾಗಿದೆ. ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರೀಸಬೇಕು. ಆಗಿದ್ದಲ್ಲಿ ಇಲ್ಲಿವರೆಗೆ ರೈತರ ದುಡಿಮೆಯ ಸಂಚಕಾರತಂದ ಕಾರಣ ತಲಾಶಕುಟುಂಬಕ್ಕೆ ಕನಿಷ್ಠ 20ಲಕ್ಷರೂ. ಪರಿಹಾರ ನೀಡಿ ಭೂಮಿಯನ್ನು ಹಿಂತಿರುಗಿಸಬೇಕು. ಎಂದರು.  ಜನವಾದಿ ಮಹಿಳಾ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಜೆ ಚಂದ್ರಕುಮಾರಿ,  ಪಾಂಡು, ಜಂಗ್ಲಿಸಾಬ್, ಡಿವೈಎಫ್ಐ ಮುಖಂಡವನ್ನೂರು ಸಾಬ್ ಮಾತನಾಡಿದರು.ಕಾರ್ಯಕ್ರಮ ಬೆಂಬಲಿಸಿ  ಎನ್.ಡಿ.ವೆಂಕಮ್ಮ, ಪ್ರೊ. ವೀರೇಶ್, ಪ್ರೊ. ಚಾಂದ್ ಪಾಷಾ, ವಿಶಾಲ್ ಮ್ಯಾಸರ್,  ಡಿ.ಬಸಂತ್, ಉಮಾಮಹೇಶ್ವರ,  ಪಿ ಆರ್.ವೆಂಕಟೇಶ್   ಸ್ವಾತಂತ್ರ್ಯ ಕುರಿತಾದ ಕವಿತೆಗಳನ್ನು ವಾಚಿಸಾದರು. ಜನವಾದಿ ಸಂಘದ ಕಾರ್ಯಕರ್ತೆರ ಅವರ ಪುಟ್ಟ ಮಕ್ಕಳು ಸ್ವಾತಂತ್ರ್ಯ ಹೋರಾಟ ದಲ್ಲಿ ಮಹಿಳೆಯರ ಏಕಪಾತ್ರಾ ಭಿನಯ. ಹೋರಾಟದ ಹಾಡುಗಳ ಸಾಂಸ್ಕೃತಿಕ ಕಾರ್ಯಕ್ರಮದ ನಡೆದವು.ಎಂ. ತಿಪ್ಪೇ ಸ್ವಾಮಿ ಕಾರ್ಯಕ್ರಮ ನಿರೂಪಣೆ.  ನಾಗದೇವ್, ಜಂಗ್ಲಿ ಸಾಬ್, ಗೋವರ್ಧನ್ ರೆಡ್ಡಿ ವೇಣಿ ವೀರಪುರ , ದಮ್ಮೂರು ಗಂಗಾಧರ್ ಕೊಳಗಲ್ಲು,ತಿಮ್ಮನಗೌಡ ಹರಗನ ಡೋಣಿ, ಯು ಯಾರ್ರೀ ಸ್ವಾಮಿ, ರಾಣಿ, ನೀಲಾವತಿರೆಡ್ಡಿ, ಈರಮ್ಮ ಅಂಗನವಾಡಿ, ಒಂಕಾರಿ ಅಕ್ಷರ ದಾಸೋಹ ಮುಂತಾದವರು ಭಾಗ ವಹಿಸಿದ್ದರು