ಡಿಸಿ ಕಚೇರಿಯಲ್ಲಿ ಕ್ಯಾಂಟೀನ್ ವ್ಯವಸ್ಥೆಯಲ್ಲದೆ ನಾಗರಿಕರ ಪರದಾಟ

ಕೋಲಾರ, ಆ,೨೪- ನಗರ ಹೊರವಲಯದಲ್ಲಿನ ಜಿಲ್ಲಾಡಳಿತಾಧಿ ಕಾರಿಗಳ ಕಚೇರಿಗೆ ದಿನ ನಿತ್ಯ ನೊರಾರು ಮಂದಿ ಸಾರ್ವಜನಿಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹೋಗಿ ಬರುತ್ತಾರೆ. ಅದರೆ ಮಧ್ಯಾಹ್ನ ಊಟದ ವೇಳೆ ಸಾರ್ವಜನಿಕರಿಗೆ ಯಾವೂದೇ ಕ್ಯಾಂಟಿನ್ ವ್ಯವಸ್ಥೆ ಇಲ್ಲದೆ ಇರುವುದು ಶೋಚನಿಯ ಸಂಗತಿಯಾಗಿದೆ. ಊಟ,ತಿಂಡಿ,ಕಾಫಿ ಕುಡಿಯಲು ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ದುಬಾರಿ ಹೋಟೆಲ್‌ಗಳಿಗೆ ಹೋಗ ಬೇಕಾದ ಪರಿಸ್ಥಿತಿ ಇದ್ದು ಬಡವರ ಪಾಲಿಗೆ ಇದು ಜೇಬಿಗೆ ಹೊರೆಯಾಗಲಿದೆ
ಈ ಹಿಂದೆ ಜಿಲ್ಲಾಡಳಿತ ಕಚೇರಿಯಲ್ಲಿಯೇ ಸ್ತ್ರೀ ಶಕ್ತಿ ಸಂಘಗಳಿಗೆ ಕ್ಯಾಂಟಿನ್ ನಡೆಸಲು ಅವಕಾಶ ಕಲ್ಪಿಸಲಾಗಿತ್ತು ಆಗ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರವಾದ ಊಟ ತಿಂಡಿಗಳು ಸಿಗುತ್ತಿತ್ತು ಇದರಿಂದಾಗ ಯಾರು ಹೊಟ್ಟೆ ಹಸಿವೆಯಿಂದ ಇರ ಬೇಕಾದ ಪರಿಸ್ಥಿತಿ ಇರಲಿಲ್ಲ.
ಅದರೆ ಕಳೆದ ಸುಮಾರು ಒಂದು ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಕ್ಯಾಂಟಿನ್ ಬಾಗಿಲು ಮುಚ್ಚಿದ ನಂತರ ಬೇರೆಯವರಿಗೆ ಕ್ಯಾಂಟಿನ್ ನಡೆಸಲು ಜಿಲ್ಲಾಡಳಿತ ಯಾವೂದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಹೊರಗಿನಿಂದ ಬಂದವರೂ ಜಿಲ್ಲಾ ಕೇಂದ್ರದಲ್ಲಿನ ಜಿಲ್ಲಾಡಳಿತ ಕಚೇರಿಯಲ್ಲಿ ಕ್ಯಾಂಟಿನ್ ವ್ಯವಸ್ಥೆ ಇಲ್ಲದಿರುವುದನ್ನು ಟೀಕಿಸುವಂತಾಗಿದೆ.
ಇಷ್ಟೆ ಅಲ್ಲದೆ ಜಿಲ್ಲಾಡಳಿತ ಕಚೇರಿಯು ಮೂರು ಅಂತಸ್ಥಿನ ಕಟ್ಟಡ ಹೊಂದಿದೆ. ವಿಕಲ ಚೇತನ ಸಾರ್ವಜನಿಕರು ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿ ಕೊಳ್ಳಲು ಮೆಟ್ಟಿಲುಗಳನ್ನು ಹತ್ತಿ ಹೋಗ ಬೇಕಾಗಿರುವುದು ದುಸ್ಸರವಾಗಿದೆ. ಸರ್ಕಾರವು ಮೇಲಿನ ಅಂತಸ್ತಿನ ಕಟ್ಟಡಗಳಿಗೆ ಹೋಗಲು ಲಿಫ್ಟ್ ಅಳವಡಿಸಿದೆ ಅದರೆ ಲಿಫ್ಟ್ ಕೆಟ್ಟು ಹೋಗಿ ಸುಮಾರು ಒಂದು ವರ್ಷಕ್ಕ್ಕೂ ಹೆಚ್ಚು ದಿನಗಳೇ ಕಳೆದಿದ್ದು ಈ ಕುರಿತು ಜಿಲ್ಲಾಡಳಿದ ಗಮನಕ್ಕೆ ಹಲವಾರು ತಂದರೂ ಸಹ ಈವರೆಗೆ ಲಿಫ್ಟ್ ದುರಸ್ಥಿ ಮಾಡಿಸುವಲ್ಲಿ ನಿರ್ಲಕ್ಷಿಸಿರುವುದು ವಿಕಲ ಚೇತನರು, ವೃದ್ದರು, ರೋಗಿಗಳ ಮೇಲೆ ಎಷ್ಟು ಮಾತ್ರ ಕಾಳಜಿ ಇದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.
ಈಗಾಲಾದರೂ ಜಿಲ್ಲಾಡಳಿತ ಸಾರ್ವಜನಿಕರ ಅನುಕೂಲಕ್ಕೆ ಕ್ಯಾಂಟಿನ್ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೇ ಮೊಬೈಲ್ ಕ್ಯಾಂಟಿನ್ ಸೌಲಭ್ಯವನ್ನಾದರೂ ಕಲ್ಪಿಸುವಂತಾಗಲಿ ಹಾಗೂ ಲಿಫ್ಟ್ ವ್ಯವಸ್ಥೆಗಳನ್ನು ಸರಿಪಡೆಸಿ ವಿಕಲಚೇತನರಿಗೆ ಹಾಗೂ ವಯೋವೃದ್ದರಿಗೆ, ಅನಾರೋಗ್ಯ ಹೊಂದಿದವರಿಗೆ ಕಚೇರಿಗೆ ಬರಲು ಅನುವು ಮಾಡಿ ಕೊಡುವರೇ ಎಂದು ನಿರೀಕ್ಷೆಯಲಿದ್ದಾರೆ ನಾಗರಿಕರು.