ಡಿಸಿ ಎಸ್ ಪಿ ಸೇರಿ ವಿಜಯನಗರ ಇಬ್ಬರು ದಕ್ಷ ಅಧಿಕಾರಿಗಳ ವರ್ಗ

ಹೊಸಪೇಟೆ: ವಿಜಯನಗರ ಜಿಲ್ಲಾಧಿಕಾರಿ ಅನಿರುಧ್ ಶ್ರವಣ್, ಎಸ್ಪಿ ಡಾ. ಅರುಣ್ ಕೆ ಏಕಕಾಲದಲ್ಲಿ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಆದೇಶ ನೀಡಿದೆ. ಕಳೆದ ಒಂದು ವರ್ಷಗಳಿಂದ ಡಿಸಿ, ಎಸ್ಪಿಯಾಗಿದ್ದ ಅಧಿಕಾರಿಗಳು
ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದರು.
ಇವರ ಪ್ರಾಮಾಣಿಕ ಮಾಡಿದ ಸೇವೆಗೆ ಸರ್ಕಾರ ಇಬ್ಬರಿಗೂ ಸ್ಥಳ ನಿಯುಕ್ತಿ ಮಾಡದೇ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದ್ದು ವಿಶೇಷವೇ ಸರಿ.
ವಿಜಯನಗರ ನೂತನ ಜಿಲ್ಲಾಧಿಕಾರಿಯಾಗಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿದ್ದ ಟಿ. ವೆಂಕಟೇಶ್ ಬಾಬು ನೇಮಕವಾಗಿದ್ದಾರೆ.
ಹೊಸ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯಾಗಿ ಹರಿಬಾಬು ನೇಮಕ ಮಾಡಿಯೂ ರಾಜ್ಯ ಸರ್ಕಾರ ಆದೇಶಿಸಿದೆ.