ಡಿಸಿ‌ ಕಚೇರಿ ಮುಂದಿನ ಜಿಲ್ಲಾ ವಿಭಜನೆ ಹೋರಾಟ ಮುಕ್ತಾಯ

ಬಳ್ಳಾರಿ ಜ 12 : ಆಖಂಡ ಜಿಲ್ಲಾ ಹೋರಾಟ ಸಮಿತಿ ಅಖಂಡ ಬಳ್ಳಾರಿ ಜಿಲ್ಲೆಗೆ ಒತ್ತಾಯಿಸಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಕ್ತಾಯವಾಗಿದೆ ಎಂದು ಹೇಳುದೆ.
ಸಮಿತಿಯಿಂದ ಬಳ್ಳಾರಿ ಜಿಲ್ಲೆ ವಿಭಜನೆ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕಳೆದ ಡಿಸೆಂಬರ್ 14ರಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದಿಗೆ 30ನೇ ದಿನಕ್ಕೆ ಕಾಲಿರಿಸಿತ್ತು. ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ಮೊದಲನೇ ಹಂತದ ಪ್ರತಿಭಟನೆಯ ಮುಕ್ತಾಯವಾಗಿದೆ.
ಈ ಆಕ್ಷೇಪಣೆಯ ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮಕ್ಕೆಸಮಾಲೋಚಿಸಿ ಮುಂದಿನ ಹೋರಾಟವನ್ನು ರೂಪಿಸಲಾಗುವುದು. ಇದರ ಅನುಗುಣವಾಗಿ ಕರಪತ್ರದ ಮೂಲಕ ಮಾತ್ರ ಪ್ರತಿಭಟಿಸುವುದು ಅಲ್ಲ, ಜನರ ಕೂಗು ಅಖಂಡತೆಯಲ್ಲಿ ಇರುವುದನ್ನು ಬೃಹತ್ ರ‌್ಯಾಲಿ ಪ್ರದರ್ಶನದ ಮೂಲಕ ಸರ್ಕಾರದ ಗಮನ ಸೆಳೆಯುವುದು ಈ ಹೋರಾಟದ ಒಂದು ಸ್ವರೂಪವಿರುವುದು. ಅದಲ್ಲದೆ ಕಾನೂನಿನ ಸಮರನ ಡೆಸುವುದು ಅಖಂಡ ಜಿಲ್ಲೆಯ ಹೋರಾಟ ಸಮಿತಿಯ ಒಂದು ಭಾಗವಾಗಿದೆಂದು ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.