ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲು ಒತ್ತಾಯ

ದಾವಣಗೆರೆ.ಡಿ.೧: ದಾವಣಗೆರೆ ಡಿಸಿಸಿ ಬ್ಯಾಂಕ್ ನಿಂದ ಹಣಸಾಲ ಪಡೆದು ಮೋಸ, ವಂಚನೆ, ಹಣ ದುರುಪಯೋಗ ಮಾಡಿ ಬೇನಾಮಿ ವ್ಯವಹಾರ ನಡೆಸಿರುವ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವಂತೆ ನ್ಯಾಯವಾದಿ ಎಸ್ ಪರಮೇಶ್ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿಂದು‌ ಮಾತನಾಡಿದ ಅವರು ದಾವಣಗೆರೆ ಡಿಸಿಸಿ ಬ್ಯಾಂಕ್ ನಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಜೆ ಆರ್ ಷಣ್ಮುಖಪ್ಪ ಇವರ ಅಧಿಕಾರವಧಿಯಲ್ಲಿ 39.80 ಲಕ್ಷ ರೂ ಗಳನ್ನು ಸಾಲವಾಗಿ ಪಡೆದು ಇವರ ಅಧೀನ ದಲ್ಲಿರುವ  ದಾವಣಗೆರೆ ನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ದಾವಣಗೆರೆ ಇದಕ್ಕೆ ಅಲ್ಪಾವಧಿ ಸಾಲವನ್ನು ನೀಡಿದ್ದು ರೈತರ ಹೆಸರಿನಲ್ಲಿ ಪಡೆಯಲಾದ ಸಾಲವನ್ನು ಆಡಳಿತ ಮಂಡಳಿಯ ಪದಾಧಿಕಾರಿಗಳ ದುರುಪಯೋಗ ಮಾಡಿಕೊಂಡಿದ್ದು ಈ ಕೂಡಲೇ ಸೊಸೈಟಿ ಯನ್ನು ಸೂಪರ್ ಸೀಡ್ ಮಾಡುವ ಮೂಲಕ ತನಿಖೆ ನಡೆಸುವಂತೆ ಆರ್ ಸಿಎಸ್ ಗೆ ಒತ್ತಾಯಿಸಿದರು.19 ಜನ ರೈತರ ಹೆಸರಿನ ಮೇಲೆ ಪಡೆಯಲಾಗಿದ್ದ ಸಾಲದ ಈಗಾಗಲೇ ಇದೇ ವ್ಯಕ್ತಿಗಳು ಕಾಡಜ್ಜಿಯಲ್ಲಿ ಇರುವ ಸಹಕಾರ ಸಂಘದಲ್ಲಿ ಸಾಲ ಪಡೆದಿದ್ದು ಅವರ‌ ಹೆಸರಿನಲ್ಲಿ ಬೇನಾಮಿ ದಾಖಲೆಗಳನ್ನು ಸೃಷ್ಟಿಸಿ 39.80 ಲಕ್ಷ  ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ಯಾಂಕಿನ ಸಿಬ್ಬಂದಿ  ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ. ಇದು ತಿಳಿದ ನಂತರ ಒಂದೇ ಬಾರಿ ಎಲ್ಲಾ ಹಣವನ್ನು ಬ್ಯಾಂಕಿಗೆ ತುಂಬಿದ್ದು ಸಾರ್ವಜನಿಕರ ಹಣವನ್ನು ದೋಚುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಲ್ಲದೆ ಕೆಸಿಸಿ ಸಾಲ ನೀಡುವಾಗ ಅವರು ಸಲ್ಲಿಸಿರುವ ಪಹಣಿಗಳನ್ನು ಪರಿಶೀಲಿಸದೆ ನಿರ್ಲಕ್ಷ್ಯ ಜವಾಬ್ದಾರಿ ವಹಿಸಿದ್ದಲ್ಲದೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ 19 ಜನ ಸಾಲಗಾರರ ಪಹಣಿಯನ್ನು ಪರಿಶೀಲಿಸಿದರೆ ಇವರೆಲ್ಲರೂ ಬೇರೆ ಬೇರೆ ಬ್ಯಾಂಕಿನಲ್ಲಿ ಇದೇ ಜಮೀನನ್ನು ಆಧಾರ ಮಾಡಿ ಸಾಲ ತೆಗೆದುಕೊಂಡಿದ್ದು ಆದರೂ ಅದೇ ದಾಖಲೆಗಳನ್ನು ಬೇನಾಮಿಯಾಗಿ  ಸಲ್ಲಿಸಿ ಸಾಲ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು .19 ಜನ ಸಾಲಗಾರರ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಸಾಲ ತೆಗೆದುಕೊಂಡ ಸಾಲ ನೀಡಿದ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲದೆ ಎಸಿಬಿಯವರು ಈ ಕುರಿತು ಪ್ರಕರಣದ ತನಿಖೆ ನಡೆಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗೋಪಾಲ್ ನಾಗರಾಜು  ಇದ್ದರು.