ಡಿಸಿಸಿ ಬ್ಯಾಂಕ್: ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ:ಖರ್ಗೆ

ಕಲಬುರಗಿ.ಜ.9:ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ ಆಡಳಿತ ದುರುಪಯೋಗ ಹಾಗೂ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಟ್ವಿಟ್ ಮಾಡಿದ್ದಾರೆ.

ಶಹಾಪುರ ಶಾಸಕರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರ ಟ್ವಿಟ್ ಗೆ ರೀ ಟ್ವಿಟ್ ಮಾಡಿರುವ ಶ್ರೀ ಪ್ರಿಯಾಂಕ್ ಖರ್ಗೆ ಅವರು ರಾಜ್ಯಗಳಲ್ಲಿ ಸರಕಾರ ರಚಿಸುವುದಾಗಲೀ ಅಥವಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲೀ, ಬಿಜೆಪಿ ಆಡಳಿತ ದುರಪಯೋಗಪಡಿಸಿಕೊಂಡು, ಹಣದ ಆಮಿಷವೊಡ್ಡಿ‌ ವಿರೋಧ ಪಕ್ಷದವರನ್ನು ಬೆದರಿಸುತ್ತಾರೆ.

ಬಹುಶಃ ಅವರು‌ ಅಧಿಕಾರಕ್ಕೆ ಬರಲು ಇದೊಂದೆ ಮಾರ್ಗವಿದೆಯಂದು ತೋರುತ್ತದೆ ಎಂದಿದ್ದಾರೆ.

ಈ ಮುನ್ನ ಟ್ವಿಟ್ ಮಾಡಿದ್ದ ದರ್ಶನಾಪುರ ಅವರು ವಾಮಮಾರ್ಗದ ಮೂಲಕ‌ ಅಧಿಕಾರ ಹಿಡಿದಿರುವ ಬಿಜೆಪಿ ಈ ಆಟ ಬಹಳ ದಿನ ನಡೆಯುವುದಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ‌ ಆಯ್ಕೆಯಾದ ನಿರ್ದೇಶಕರನ್ನು ಕಾನೂನುಬಾಹಿರವಾಗಿ‌ ಅನರ್ಹಗೊಳಿಸಿ ಗದ್ದುಗೆ ಹಿಡಿದ ಕ್ರಮ ನಿಜಕ್ಕೂ ತತ್ವ ಸಿದ್ದಾಂತರಹಿತ ರಾಜಕಾರಣಕ್ಕೊಂದು‌ ಉದಾಹರಣೆ. ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಟ್ವಿಟ್ ಮಾಡಿದ್ದಾರೆ.