ಡಿಸಿಸಿ ಬ್ಯಾಂಕ್ ವತಿಯಿಂದ ಶಾಂತಕುಮಾರ ಮುಧಾಳೆ ಸನ್ಮಾನ

ಬೀದರ,ಮಾ 31: ಜರ್ಮನ ಇಂಟರ ನ್ಯಾಶನಲ್ ಪೀಸ ಯುನಿವರ್ಸಿಟಿವತಿಯಿಂದ
ಗೌರವ ಡಾಕ್ಟರೇಟ್ ಪ್ರಶಸ್ತಿಗೆಭಾಜನರಾದ ಹಾಗೂ ಇಂಟರನ್ಯಾಷನಲ್‍ಡೆವಲಪಮೆಂಟ ಯುನಿವರ್ಸಿಟಿ (ಯು.ಎಸ್.ಏ) ಯಿಂದಮಹಾತ್ಮಗಾಂಧಿ ನ್ಯಾಷನಲ್ ಪ್ರಶಸ್ತಿ
ಪಡೆದ ಶಾಂತಕುಮಾರ ಎಸ್.ಮುಧಾಳೆ ಅವರನ್ನು ಡಿ.ಸಿ.ಸಿ.ಬ್ಯಾಂಕ್ ವತಿಯಿಂದ ಡಾ.
ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಉಮಾಕಾಂತ ನಾಗಮಾರಪಳ್ಳಿ ಅವರು ವಹಿಸಿದ್ದರು
ಸನ್ಮಾನ ಸ್ವೀಕರಿಸಿದಶಾಂತಕುಮಾರ ಮುಧಾಳೆರವರು ಮಾತನಾಡಿ ಗೆಳೆಯರಾದ ಉಮಾಕಾಂತನಾಗಮಾರಪಳ್ಳಿಯವರು ಮುಂಚೆಯಿಂದಲು ಸಹಸ್ವಚ್ಛತೆ ಮತ್ತು ಶಿಸ್ತಿಗೆ ಪ್ರಧಾನ್ಯತೆ ಕೊಟ್ಟುಪ್ರಸ್ತುತದಲ್ಲಿಯೂ ಸಹ ಅದನ್ನುಮುಂದುವರಿಸಿಕೊಂಡು ಹೊಗುತ್ತಾ ಜಿಲ್ಲಾ ಸಹಕಾರಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ಉತ್ತಮ ಆಡಳಿತವನ್ನು ನಡೆಸಿಕೊಂಡು ಹೊಗುತ್ತಿದ್ದಾರೆ. ನಾನು ಇಷ್ಟು ಬೆಳೆಯಲುತಂದೆಯ ಸಮಾನರಾದ ದಿ.ಗುರುಪಾದಪ್ಪನಾಗಮಾರಪಳ್ಳಿರವರ ಆರ್ಶಿವಾದ ಮತ್ತು ಮಾರ್ಗದರ್ಶನವೇ ಕಾರಣವಾಗಿದೆ ಎಂದರು.ಸಮಾರಂಭದಲ್ಲಿ ಇವರಿಬ್ಬರಬಾಲ್ಯದ ಗೆಳೆಯ ನಂದಕುಮಾರ ಜೋಶಿ ಅವರು ಅಭಿನಂದನೆ ಸಲ್ಲಿಸಿದರು. ಸಮಾರಂಭದಲ್ಲಿಬ್ಯಾಂಕಿನ ನಿರ್ದೇಶಕ ಪರಮೇಶ್ವರಮುಗಟೆ ಹಾಗೂ ಎಪಿಎಂಸಿ ಔರದ ನಿರ್ದೇಶಕರಾದಭೀಮರಾವ ಪಾಟೀಲ್ ಡಿಗ್ಗಿ, ಮಾಧವರಾವ ಪಾಟೀಲ್,
ಸೂರ್ಯಕಾಂತ ಬಿರಾದಾರ ಮದನೂರ,ಇಂಜನಿಯರ್ ಹಾವಶೆಟ್ಟಿ ಪಾಟೀಲ್, ಹಾಗೂ
ಬ್ಯಾಂಕಿನ ಸಿ.ಇ.ಓ. ಮಲ್ಲಿಕಾರ್ಜುನ ಮಹಾಜನ್, ಪ್ರಧಾನವ್ಯವಸ್ಥಾಪಕರುಗಳಾದ ವಿಠಲರೆಡ್ಡಿ ಏಡಮಲ್ಲೆ,ಚನ್ನಬಸಯ್ಯ ಸ್ವಾಮಿ, ಉಪ ಪ್ರಧಾನವ್ಯವಸ್ಥಾಕರುಗಳಾದ ರಾಜಕುಮಾರ ಆಣದೂರೆ,ಸದಾಶಿವ ಪಾಟೀಲ್, ಪಂಡರಿರೆಡ್ಡಿ, ಅನೀಲಕುಮಾರ ಪಾಟೀಲ್,ದೀನದಯಾಳ ಮನ್ನಳ್ಳಿ, ರಾಜಶೇಖರಯ್ಯಾ,ಬಸವರಾಜ ಕಲ್ಯಾಣ ಮತ್ತು ವಿಜಯಕುಮಾರ ಹೂಗಾರ ಉಪಸ್ಥಿತರಿದ್ದರು.ಸಂಚಾಲನೆಯನ್ನು ಶ್ರೀಧರ ಕುಲಕರ್ಣಿ
ನಡೆಸಿಕೊಟ್ಟರು ಸ್ವಾಗತ ಗೀತೆ ಆನಂದಕಾರಬಾರಿ ಹಾಡಿದರು.ಪಂಡರಿರೆಡ್ಡಿ ವಂದನಾರ್ಪಣೆ ಮಾಡಿದರು.