ಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಅಭಿನಂದನೆ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಮಧುಗಿರಿ, ನ. ೧೭- ತಾಲ್ಲೂಕಿನ ಕುಂಚಿಟಿಗ ವಕ್ಕಲಿಗ ಜನಾಂಗಕ್ಕೆ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ರಾಜಕೀಯವಾಗಿ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್‌ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ಕುಂಚಿಟಿಗ ವಕ್ಕಲಿಗ ಸಮುದಾಯ ಭವನದಲ್ಲಿ ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಹಿನ್ನೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಎರಡು ಬಾರಿ ಡಿಸಿಸಿ ಬ್ಯಾಂಕ್‌ಗೆ ಸ್ಪರ್ಧಿಸಿದ್ದು, ಪ್ರಸ್ತುತ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಲು ಕೆ.ಎನ್.ರಾಜಣ್ಣ ಮತ್ತು ಆರ್ ರಾಜೇಂದ್ರ ರವರ ಪರಿಶ್ರಮ ಕಾರಣ ಎಂದರು.
ಅದೇ ರೀತಿ ರಾಜ್ಯದಲ್ಲಿರುವ ಬಹುತೇಕ ಡಿಸಿಸಿ ಬ್ಯಾಂಕ್‌ಗಳಿಗೆ ಚುನಾವಣೆ ನಡೆದಿದೆ. ಆದರೆ ತುಮಕೂರು ಡಿಸಿಸಿ ಬ್ಯಾಂಕ್‌ಗೆ ಚುನಾವಣೆ ನಡೆಯದೆ ಎಲ್ಲಾ ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡುವಲ್ಲಿ ಕೆ.ಎನ್.ರಾಜಣ್ಣ ಮಹತ್ತರ ಪಾತ್ರ ವಹಿಸಿದ್ದಾರೆ. ಈಗಿನ ಆಡಳಿತ ಮಂಡಳಿಗೆ ಮೂರು ಮಂದಿ ಕುಂಚಿಟಿಗರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ಅಲ್ಲದೆ ತಾಲ್ಲೂಕಿನ ೧೮ ಮಂದಿ ಕುಂಚಿಟಿಗ ವಕ್ಕಲಿಗ ಸಮುದಾಯದ ಯುವಕ ಯುವತಿಯರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದ್ದಾರೆ ಮತ್ತು ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದವರಲ್ಲಿ ಬಹುತೇಕ ವಕ್ಕಲಿಗ ಜನಾಂಗಕ್ಕೆ ಸೇರಿದ ರೈತರಿದ್ದಾರೆ. ಕೆ.ಎನ್.ರಾಜಣ್ಣನವರು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಕುಂಚಿಟಿಗ ವಕ್ಕಲಿಗ ಸಮುದಾಯಕ್ಕೆ ರಾಜಕೀಯ ಪ್ರಾಧಾನ್ಯತೆ ನೀಡಿದ್ದಾರೆ. ತುಮಕೂರು ಹಾಲು ಒಕ್ಕೂಟ ಡಿಸಿಸಿ ಬ್ಯಾಂಕ್ ಎ.ಪಿ.ಎಂ.ಸಿ ಪಿ.ಎಲ್.ಡಿ ಬ್ಯಾಂಕ್, ತಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರು, ಜಿ.ಪಂ.ನಲ್ಲಿ ನಮ್ಮವರು ಹೆಚ್ಚು ಆಯ್ಕೆಯಾಗಲು ಕೆ.ಎನ್.ರಾಜಣ್ಣ ಕಾರಣ ಎಂದು ಅವರು ಪುನರುಚ್ಚರಿಸಿದರು.
ಕೆ.ಎನ್.ರಾಜಣ್ಣನವರು ಮಧುಗಿರಿ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಪಕ್ಷಾತೀತವಾಗಿ ಮತ್ತು ಜ್ಯಾತ್ಯಾತೀತವಾಗಿ ಎಲ್ಲಾ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಆದರೆ ನಮ್ಮ ಜನಾಂಗದವರು ಅವರನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದು, ಮುಂದಿನ ದಿನಗಳಲ್ಲಿ ಅವರ ಸಹಕಾರದಿಂದ ಸಂಘದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದ ಅವರು, ಸಂಘದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಅಂಗಡಿ ಮಳಿಗೆಗಳಿಗೆ ವೈಯಕ್ತಿಕವಾಗಿ ೨ ಲಕ್ಷ ರೂ ನೀಡುವುದಾಗಿ ತಿಳಿಸಿದರು.
ಪುರಸಭಾ ಸದಸ್ಯ ಹಾಗೂ ಸಂಘದ ನಿರ್ದೇಶಕ ಲಾಲಾಪೇಟೆ ಮಂಜುನಾಥ್ ಮಾತನಾಡಿ, ನೂತನವಾಗಿ ಆಯ್ಕೆಯಾಗಿರುವ ೩ ಮಂದಿನ ನಿರ್ದೇಶಕರುಗಳಿಗೆ ನಮ್ಮ ಸಂಘದ ವತಿಯಿಂದ ಸನ್ಮಾನ ಮಾಡುವಂತೆ ತಿಳಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ನಿರ್ದೇಶಕಿ ಸುವರ್ಣಮ್ಮ ಮಾತನಾಡಿ, ಕುಂಚಿಟಿಗ ವಕ್ಕಲಿಗರ ಸಂಘದಿಂದ ಅಪೆಕ್ಸ್ ಅಧ್ಯಕ್ಷ ಕೆ.ಎನ್.ರಾಜಣ್ಣನವರನ್ನು ಸನ್ಮಾನ ಮಾಡಲು ಮಾಡಿದ ಮನವಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಕಾರತ್ಮವಾಗಿ ಸ್ಪಂದಿಸಿದರು ಮತ್ತು ಮೂರು ಮಂದಿ ಕುಂಚಿಟಿಗ ಜನಾಂಗದ ನಿರ್ದೇಶಕರುಗಳನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಜಗದೀಶ್ ಗೊಂದಪ್ಪ, ಕಾರ್ಯದರ್ಶಿ ಉಮೇಶ್, ಖಜಾಂಚಿ ರಾಮಚಂದ್ರಪ್ಪ, ನಿರ್ದೇಶಕರುಗಳಾದ ಜಯರಾಮಯ್ಯ, ದೇವರಾಜು, ಸತೀಶ್, ಕಾಳೇಗೌಡ, ಹೆಚ್.ಬಿ.ವೀರಣ್ಣ, ಚನ್ನಲಿಂಗಪ್ಪ, ಡಿ.ಎಸ್.ಸಿದ್ದಪ್ಪ, ಬಂದ್ರೇಹಳ್ಳಿ ಕುಮಾರ್, ಟಿ.ವಿ.ಎಸ್ ಮಂಜು, ಕೆ.ರಮೇಶ್, ಡಿ.ಎಚ್.ನಾಗರಾಜು, ವ್ಯವಸ್ಥಾಪಕ ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.