ಕೊರಟಗೆರೆ, ಜೂ. ೧೭- ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಈಗಾಗಲೆ ಡಿಸಿಸಿ ಬ್ಯಾಂಕ್‌ನ ೧೨ ಎಟಿಎಂ ಶಾಖೆಗಳು ಸ್ಥಾಪನೆಯಾಗಿದ್ದು, ಪಟ್ಟಣದಲ್ಲಿ ೧೩ನೇ ಎಟಿಎಂ ಶಾಖೆ ಇದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ರಾಜೇಂದ್ರ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನೂತನ ಎಟಿಎಂ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಎಟಿಎಂ ಶಾಖೆಯಿಂದ ತಾಲ್ಲೂಕಿನ ಬ್ಯಾಂಕ್ ಗ್ರಾಹಕರಿಗೆ ದಿನದ ೨೪ ಗಂಟೆಗಳ ಸೇವೆ ಸಲ್ಲಿಸುವ ಉದ್ದೇಶವಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಎಟಿಎಂ ಶಾಖೆಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಬ್ಯಾಂಕ್ ಎಂ.ಡಿ. ಶ್ರೀಧರ್, ಆಡಳಿತ ಸಲಹೆಗಾರ ಜಂಗಮಪ್ಪ, ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣನಾಯಕ, ನಿರ್ದೇಶಕರುಗಳಾದ ಕೊರಟಗೆರೆಯ ಹನುಮಾನ್, ಲಕ್ಷ್ಣೀನಾರಾಯಣ್, ಎ.ಆರ್.ಸಿ.ಎಸ್. ಸಣ್ಣಪ್ಪಯ್ಯ, ಸಿ.ಡಿ.ಒ ವೆಂಕಟೇಶ್, ಬ್ಯಾಂಕಿನ ನೋಡಲ್ ಆಧಿಕಾರಿ ಮಂಜೇಶ್, ರಘುಪ್ರಸಾದ್, ಕೊರಟಗೆರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರುಗಳಾದ ಪಿ.ಭಾರತಿ, ಮಹೇಶ್‌ಕುಮಾರ್, ಮಂಜುನಾಥ್, ರಾಕೇಶ್, ಮೇಲ್ವಿಚಾರಕರಾದ ಬೋರಣ್ಣ, ತಿಮ್ಮರಾಜು ಮತ್ತಿತರರು ಉಪಸ್ಥಿತರಿದ್ದರು.